ಬೆಂಗಳೂರು(ಜೂ.26): ಇದೇ ಜು.16ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಒಟ್ಟು 3 ಗಂಟೆಗಳ ಅವಧಿಯ ಚಂದ್ರಗ್ರಹಣದ ಸುಂದರ ದೃಶ್ಯವನ್ನು ಭಾರತೀಯರು ಕಣ್ತುಂಬಿಕೊಳ್ಳಬಹುದಾಗಿದೆ.

ಜು.16ರ ರಾತ್ರಿ ಸುಮಾರು 9-30ಕ್ಕೆ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬರುವುದರಿಂದ, ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ . ಜು.17ರ ಮಧ್ಯರಾತ್ರಿ 3-01ಕ್ಕೆ ಭಾಗಶಃ ಚಂದ್ರಗ್ರಹಣ ಮುಕ್ತಾಯಗೊಳ್ಳಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಜು.02ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.  ಆದರೆ ಭಾಗಶಃ ಚಂದ್ರಗ್ರಹಣ ಉತ್ತರ ಅಮೆರಿಕ ಹೊರತುಪಡಿಸಿ ಪ್ರಪಂಚದ ಉಳಿದೆಲ್ಲಾ ಭಾಗದಲ್ಲಿ ಸ್ಪಷ್ಟವಾಗಿ ಗೋಚರವಾಗಲಿದೆ.