ಮೂವಿ, ಅಡುಗೆ, ಬ್ಯೂಟಿ ಟಿಪ್ಸ್ -ಆನ್ ಮೊಬೈಲ್‌ನಿಂದ ವೀಡಿಯೋ ಬಿಡುಗಡೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 5:44 PM IST
OnMobile launches Onmo video content in 5 Indian languages
Highlights

ಮೂವಿ ದೃಶ್ಯಾವಳಿ, ಅಡುಗೆ ವಿಧಾನ, ಆಸಕ್ತಿಯ ಸ್ಥಳ, ಸೌಂದರ್ಯಕ್ಕೆ ಟಿಪ್ಸ್, ಕೆಟಗರಿಗಳು ಸೇರಿದಂತೆ ಕುತೂಹಕರ ವೀಡಿಯೋಗಾಗಿ  ಆನ್ ಮೊಬೈಲ್‌ನಿಂದ ಹೊಸ ವೀಡಿಯೋ ಬಿಡುಗಡೆ ಮಾಡಿದೆ. ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು(ಅ.11): ಭಾರತ, ಬಾಂಗ್ಲಾದೇಶ ಮತ್ತು ಮಧ್ಯಪೂರ್ವದೇಶಗಳಲ್ಲಿ ಮೊಬೈಲ್ ಮನರಂಜನೆಯಲ್ಲಿ ಮುಂಚೂಣಿಯಲ್ಲಿರುವ ಆನ್ ಮೊಬೈಲ್ ಕಂಪನಿ ಆನ್‌ಮೋ ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ಈ ವಿಡಿಯೋಗಳನ್ನು ನೋಡಬೇಕಾದರೆ ಮೊದಲು ಆನ್ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಬಂಗಾಳಿ-ಈ ಐದು ಭಾಷೆಗಳಲ್ಲಿ ಎಲ್ಲೂ ಸಿಗದಂತ ಶ್ರೀಮಂತ ಮತ್ತು ವಿಶೇಷ ವಿಷಯಗಳನ್ನು ಗ್ರಾಹಕರಿಗೆ ಒದಗಿಸಲಿದೆ ಅಂತ ಕಂಪನಿ ಹೇಳುತ್ತಿದೆ. ಗೃಹಿಣಿ, ಕಾಲೇಜು ವಿದ್ಯಾರ್ಥಿ, ಶಾಲಾ ಮಕ್ಕಳು, ವೃತ್ತಿನಿರತ ವೃತ್ತಿಪರರು ಅಥವಾ ಹಿರಿಯ ನಾಗರಿಕರು ಹೀಗೆ ಎಲ್ಲರಿಗೂ ಆನ್‌ಮೋ ವಿಡಿಯೋಗಳು 12 ಕೆಟಗರಿಗಳಲ್ಲಿ ಮೂಡಿ ಬರಲಿವೆ.

ಮೂವಿ ದೃಶ್ಯಾವಳಿ, ಅಡುಗೆ ವಿಧಾನ, ಆಸಕ್ತಿಯ ಸ್ಥಳ, ಸೌಂದರ್ಯಕ್ಕೆ ಟಿಪ್ಸ್, ಮಕ್ಕಳ ಮನರಂಜನೆ, ಭಕ್ತಿ, ಆರೋಗ್ಯ ಮತ್ತು ಫಿಟ್ನೆಸ್ ಮುಂತಾದ ಕೆಟಗೆರಿಗಳನ್ನು ಅದು ಒಳಗೊಂಡಿದೆ. ಇದರ ಚಂದಾದಾರಿಕೆಯ ಶುಲ್ಕವೂ ಕಡಿಮೆ.

loader