Asianet Suvarna News Asianet Suvarna News

ಇದ್ದಕ್ಕಿದ್ದಂತೆ Oneplus ಫೋನ್‌ಗೆ ಬೆಂಕಿ! ಆತಂಕ ಹುಟ್ಟುಹಾಕಿದ ವಿಚಿತ್ರ ಪ್ರಕರಣ

ಆಗಾಗ್ಗೆ ಫೋನ್ ಸ್ಫೋಟಗೊಳ್ಲುವ ಸುದ್ದಿಯನ್ನು ಓದುತ್ತಿರುತ್ತೇವೆ. ಇದರಲ್ಲಿ ಏನ್ ವಿಶೇಷ ಅಂತೀರಾ? Oneplus ಫೋನ್‌ಗೆ ರಾತೋರಾತ್ರಿ ಬೆಂಕಿ ಹತ್ತಿಕೊಂಡಿದೆ. ಆದರ ಹಿಂದಿನ ನಿಗೂಢ ಕಾರಣ ಮಾತ್ರ ಬಳಕೆದಾರನಿಗೆ ಮಾತ್ರವಲ್ಲ ಕಂಪನಿಗೂ ತಲೆನೋವು ತಂದಿದೆ.ಈ ಸ್ಟೋರಿ ಓದಿ...
 

OnePlus One Smartphone Catches Fire Company Says Will Look Into Matter
Author
Bengaluru, First Published Jul 5, 2019, 3:39 PM IST

ಬೆಂಗಳೂರು (ಜು.05): ಹೆಚ್ಚು ದುಡ್ಡು ಕೊಟ್ಟು ಮೊಬೈಲ್ ಖರೀದಿಸುವ ಹಿಂದೆ ‘ಸುರಕ್ಷತೆ’ಯ ಉದ್ದೇಶವೂ ಒಂದು. ಹೆಚ್ಚು ಬಳಸಿದಾಗ ಅದು ಬಿಸಿಯಾಗಬಾರದು, ಬೇಗ ಹಾಳಾಗಬಾರದು, ಹೆಚ್ಚು ಫೀಚರ್‌ಗಳಿರಬೇಕು, ಉತ್ತಮ ಹಾರ್ಡ್‌ವೇರ್ ಇರಬೇಕು ಎಂಬಿತ್ಯಾದಿ ಉದ್ದೇಶದಿಂದ, ಕಾಸ್ಟ್ಲಿಯಾದರೂ ಪರ್ವಾಗಿಲ್ಲ, ಒಳ್ಳೆ ಫೋನ್ ಇರ್ಲಿ ಎಂದು ಖರೀದಿಸುತ್ತೇವೆ.

Oneplus ಅಂತಹ ‘ಬೆಳೆಬಾಳುವ’ ಫೋನ್ ಕಂಪನಿಗಳ ಪೈಕಿ ಒಂದು. ಆದರೆ, Oneplus ಫೋನ್‌ಗೆ ಬೆಂಕಿ ಹತ್ತಿಕೊಂಡಿರುವುದು ಈಗ  ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Oneplus ಕಂಪನಿಯ ಮೊದಲ ಫೋನ್ ಆಗಿರುವ Oneplus 1ಗೆ ಮಧ್ಯರಾತ್ರಿ ಬೆಂಕಿ ಹತ್ತಿಕೊಂಡಿದೆ ಎಂದು ರಾಹುಲ್ ಹಿಮಾಲಿಯನ್ ಎಂಬ ಬಳಕೆದಾರ ದೂರಿದ್ದಾರೆ. ಅವರ ಸ್ನೇಹಿತೆಯೊಬ್ಬರು ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಚಿತ್ರವೆಂದರೆ, ಫೋನ್‌ಗೆ ಬೆಂಕಿ ಹತ್ತಿಕೊಳ್ಳುವ ವೇಳೆ, ಅದು ಆನ್ ಆಗಿಯೂ ಇರಲಿಲ್ಲ, ಅಥವಾ ಚಾರ್ಜಿಂಗ್‌ಗೂ ಹಾಕಿರಲಿಲ್ಲ! ಜುಲೈ 3 ರ ರಾತ್ರಿ 3.15 ರ ವೇಳೆ ಏಕಾಏಕಿ ಬೆಂಕಿಹತ್ತಿಕೊಂಡಿದೆ. ರೂಂನಲ್ಲಿ AC ಆನ್ ಆಗಿತ್ತು, ಉಷ್ಣಾಂಶ ಕೂಡಾ 19 ಡಿಗ್ರಿ ಇತ್ತು. ಅದಾಗ್ಯೂ ಬೆಂಕಿ ಹತ್ತಿಕೊಂಡಿದೆ, ಎಂದು ಅವರು ಹೇಳಿದ್ದಾರೆ.  ಹೊಗೆ ಮತ್ತು ಸುಡುವ ವಾಸನೆಯಿಂದ ಬಳಕೆದಾರರು ಎಚ್ಚೆತ್ತುಕೊಂಡಿದ್ದಾರೆ. 

ತಕ್ಷಣ ನೀರು ಸುರಿದು ಅದನ್ನು ಅಲ್ಲೇ ಆರಿಸಿದ್ದಾರೆ, ಇಲ್ಲದಿದ್ದರೇ ಸ್ಫೋಟಗೊಳ್ಳುವ ಸಾಧ್ಯತೆಗಳಿತ್ತು ಎಂದಿದ್ದಾರೆ ರಾಹುಲ್. ಮಲಗಿದ ಸ್ಥಳದಿಂದ ಕೇವಲ ಒಂದೇ ಅಡಿ ದೂರವಿದ್ದುದರಿಂದ, ಗಾಯಗೊಳ್ಳುವ ಸಾಧ್ಯತೆ, ಅಥವಾ ಹೆಚ್ಚಿನ ಅನಾಹುತವಾಗುವ ಸಾಧ್ಯತೆಗಳಿತ್ತು ಎಂದಿದ್ದಾರೆ ರಾಹುಲ್.

ನನ್ನ ಫೋನ್ 5 ವರ್ಷ ಹಳೆಯದ್ದು; ಅದರರ್ಥ ಈ ರೀತಿ ಬಳಕೆದಾರರನ್ನು ಅಪಾಯಕ್ಕೆ ದೂಡುವುದನ್ನು ಸಮರ್ಥಿಸಲಾಗದು.  ಹಾಗಾಗಿ ಅದನ್ನು ಮಾರಿದ ಅಮೆಜಾನ್ ಇಂಡಿಯಾ ಮತ್ತು Oneplus ಕಂಪನಿಯನ್ನು ರಾಹುಲ್ ಹಿಮಾಲಿಯನ್ ಹೊಣೆಗಾರನನ್ನಾಗಿಸಿದ್ದಾರೆ. 

ಅದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. 

Follow Us:
Download App:
  • android
  • ios