Asianet Suvarna News Asianet Suvarna News

ಒನ್ ಪ್ಲಸ್ 6: ಪ್ಲಸ್ ಏನಿದೆ ಮೈನಸ್ ಎಷ್ಟಿದೆ?

ಒನ್ ಪ್ಲಸ್ ಫೈವ್ ಟಿ ಕಳೆದ ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೀಗ ಕೇವಲ ಆರೇ ತಿಂಗಳಿಗೆ ಒನ್‌ಪ್ಲಸ್ 6 ಬಂದಿದೆ. ಬಿಡುಗಡೆಯಾದ ಹತ್ತು ನಿಮಿಷಗಳಲ್ಲಿ ನೂರು ಕೋಟಿ ಬಿಸಿನೆಸ್ ಮಾಡಿರುವ ಫೋನ್ ಎಂಬುದು ಸದ್ಯಕ್ಕೆ ಚಾಲ್ತಿಯಲ್ಲಿರುವ ಬಿಸಿಬಿಸಿ ಸುದ್ದಿ. 

One plus 6 review

ಬೆಂಗಳೂರು(ಮೇ 31): ಒನ್ ಪ್ಲಸ್ ಫೈವ್ ಟಿ ಕಳೆದ ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೀಗ ಕೇವಲ ಆರೇ ತಿಂಗಳಿಗೆ ಒನ್‌ಪ್ಲಸ್ 6 ಬಂದಿದೆ. ಬಿಡುಗಡೆಯಾದ ಹತ್ತು ನಿಮಿಷಗಳಲ್ಲಿ ನೂರು ಕೋಟಿ ಬಿಸಿನೆಸ್ ಮಾಡಿರುವ ಫೋನ್ ಎಂಬುದು ಸದ್ಯಕ್ಕೆ ಚಾಲ್ತಿಯಲ್ಲಿರುವ ಬಿಸಿಬಿಸಿ ಸುದ್ದಿ. 

ಒನ್‌ಪ್ಲಸ್ ತನ್ನ ಆರನೇ ಎಡಿಷನ್ ಹೊರತಂದಿದೆ. ಹಾಗೆ ನೋಡಿದರೆ ಒನ್ ಪ್ಲಸ್ ೫ಟಿ ಮತ್ತು ಒನ್ ಪ್ಲಸ್ ಸಿಕ್ಸ್‌ಗೆ ಅಂಥ ವ್ಯತ್ಯಾಸ ಏನಿಲ್ಲ. ಎರಡೂ ಫೋನುಗಳ ಬ್ಯಾಟರಿ, ಕ್ಯಾಮರಾ ಇವುಗಳೆಲ್ಲ ಒಂದೇ. ಒನ್ ಪ್ಲಸ್ ಸಿಕ್ಸ್ 6.28 ಇಂಚ್ ಡಿಸ್‌ಪ್ಲೇ, 1080 2280 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಆಕ್ಟಾ ಕೋರ್ 2.8 ಗಿಗಾ ಹರ್ಟ್ಸ್ ಸಿಪಿಯು ಹೊಂದಿರುವ ಈ ಫೋನ್ 8ಜಿಬಿ  ರ‍್ಯಾಮ್ ಹೊಂದಿದೆ.

ಇದರ ಜೊತೆಗೆ ಡ್ಯಾಶ್ ಚಾರ್ಜರ್ ಇದೆ. ಬ್ಯಾಟರಿ ಇಡೀ ದಿನ ಬರುತ್ತದೆ ಅಂತ ಹೇಳುವಂತಿಲ್ಲ. ಒನ್‌ಪ್ಲಸ್ ಸಿಕ್ಸ್ ಪ್ರಾಸೆಸರ್ ವೇಗ ಮೆಚ್ಚುವಂತಿದೆ. ಅರೆಕ್ಷಣದಲ್ಲಿ ಅನೇಕ ಫೋಟೋಗಳನ್ನು ಕ್ಲಿಕ್ಕಿಸುವ ಅವಕಾಶವೂ ಉಂಟು. ಬೇಕಾದ್ದನ್ನು ಕ್ಷಣಾರ್ಧದಲ್ಲಿ ಹುಡುಕಿ ತರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಫೇಸ್ ಐಡೆಂಟಿಫಿಕೇಶನ್ ವೇಗಕ್ಕೆ ಯಾರಾದರೂ ಬೆರಗಾಗಲೇಬೇಕು. ಎದುರಿಟ್ಟುಕೊಂಡು ಲಾಕ್ ಬಟನ್ ಅದುಮಿದ ತಕ್ಷಣ, ಫೋನ್ ಲಾಕ್ ಆಗೇ ಇಲ್ಲವೇನೋ ಎಂಬಷ್ಟು ವೇಗವಾಗಿ ಅನ್‌ಲಾಕ್ ಆಗುತ್ತದೆ. ಆದರೆ ಲಾಕ್ ಮಾಡಲು ಪಿನ್ ಬಳಸಿದ್ದರೆ ಮಾತ್ರ ಕೊಂಚ ಕಿರಿಕಿರಿ. ಅಲ್ಪಾಬೆಟ್ ಮತ್ತು ನಂಬರ್ ಸೇರಿದ ಕೀ ಬೋರ್ಡ್ ಪ್ರತ್ಯಕ್ಷವಾಗುತ್ತದೆ. 

ಇದರ ಕ್ಯಾಮರಾದ ಮೆಗಾಪಿಕ್ಸೆಲ್ ವಿಚಿತ್ರ ಸಂಯೋಗದಲ್ಲಿ ಸೊಗಸಾದ ಫೋಟೋಗಳನ್ನು ಇದರಲ್ಲಿ ಸೆರೆಹಿಡಿಯಲಿಕ್ಕಾಗದು ಅನ್ನುವುದು ಅತ್ಯಲ್ಪ ಅವಧಿಯಲ್ಲಿ ಗೊತ್ತಾದ ಸತ್ಯ. ಇದು ಕ್ರಮೇಣ ಸುಧಾರಿಸಿದರೂ ಸುಧಾರಿಸಬಹುದು. ಕ್ಯಾಮರಾದಲ್ಲಿ ಪ್ರೊಫೆಷನಲ್ ಸೆಟ್ಟಿಂಗ್ಸ್ ಇದೆ. ಟೈಮ್‌ಲ್ಯಾಪ್ಸ್, ಸ್ಲೋ ಮೋಷನ್, ಪೋರ್ಟ್ ರೈಟ್ ಮೋಡ್, ಪನೋರಮಾ ಎಲ್ಲವೂ ಇವೆ. ಅತ್ಯಂತ ಹೈ ರೆಸ್ ವಿಡಿಯೋ ಕೂಡ ಲಭ್ಯ.

ಐಫೋನಿಗೆ ಎಕ್ಸ್‌ಗೆ ಇದು ಹತ್ತಿರವಾಗಿದೆ. ಬೆಜೆಲ್‌ಲೆಸ್, ಅಂಚಿಲ್ಲದ ಡಿಸ್‌ಪ್ಲೇಯನ್ನು ಬೇಕಾದ ಸೈಜಿಗೆ ಹೊಂದಿಸಿಕೊಳ್ಳಬಹುದು. ಅತ್ಯುತ್ತಮ ಗೆಶ್ಚರ್‌ಗಳಿವೆ. ಅದನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. ಬೇಕುಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳಲು ಹತ್ತಾರು ಆಪ್ಶನ್‌ಗಳಿವೆ. ಆಧುನಿಕವಾದ ಎಲ್ಲಾ ಫೋನುಗಳಲ್ಲೂ ಇವೆಲ್ಲ ಇರುವಂಥವೇ.
 ಒನ್‌ಪ್ಲಸ್ ಸಿಕ್ಸ್‌ನ ಸೆನ್ಸರ್ ಶೇ.19ರಷ್ಟು ವಿಸ್ತಾರಗೊಂಡಿದೆ ಮತ್ತು 1.12 ಯುಎಂ ಬದಲು, 1.22 ಯುಎಂನ ಸೆನ್ಸರ್ ಹೊಂದಿರುವುದರಿಂದ ಕಡಿಮೆ ಬೆಳಕಿನಲ್ಲಿ ಸ್ಪಷ್ಟವಾದ ಫೋಟೋ ತೆಗೆಯಲು ಸಾಧ್ಯ ಎಂದು ತಂತ್ರಜ್ಞಾನಿಗಳು ಹೇಳುತ್ತಾರೆ.

ಆದರೆ ಒನ್‌ಪ್ಲಸ್‌6 ಮೊನ್ನೆ ಹತ್ತು ನಿಮಿಷದಲ್ಲಿ ಕಂಡ ಮಾರಾಟದ ಅಂಕಿ ಅಂಶವೇ ಆ ಫೋನಿನ ಕುರಿತು ಗ್ರಾಹಕರಿಗೆ ಇರುವ ನಂಬಿಕೆಯನ್ನು ಹೇಳುತ್ತದೆ. ಫೋನುಗಳಲ್ಲಿ ತಂತ್ರಜ್ಞಾನಕ್ಕಿಂತ ನಂಬಿಕೆಯೇ ಮುಖ್ಯ ಎನ್ನುವುದನ್ನು ಐಫೋನ್ ನಿರೂಪಿಸಿದೆ. ಈ ಮಧ್ಯೆ ಸರಿಸುಮಾರು ಇದೇ ಬೆಲೆಗೆ ವನ್‌ಪ್ಲಸ್‌5 ಟಿ ಕೊಂಡುಕೊಂಡು ಮುನಿಸಿಕೊಂಡವರಿಗೆಂದೇ, ಹೊಸದೊಂದು ಅಪ್‌ಡೇಟನ್ನು ವನ್‌ಪ್ಲಸ್ ನೀಡಿದೆ. ಅದು ಅತಿಮುಖ್ಯ ಅಪ್ ಡೇಟ್ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios