ಏನಿದು, ನಿಮ್ಮ ಮೊಬೈಲ್'ನ 10 ನಂಬರ್'ಗಳು 13 ಸಂಖ್ಯೆಗಳಾಗುತ್ತವೆಯೇ?

First Published 21, Feb 2018, 4:07 PM IST
No your mobile number will not have 13 digits
Highlights

ಆದರೆ ಕೆಲವು ಮಾಧ್ಯಮಗಳು ದೂರ ಸಂಪರ್ಕ ಇಲಾಖೆಯ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ಗೊಂದಲ ಉಂಟಾಗಿದೆ. ವಾಸ್ತವದಲ್ಲಿ 13 ನಂಬರ್'ಗಳಾಗಿ ಬದಲಾಗುವುದು ಎಂ2ಎಂ(ಮಷಿನ್ ನಿಂದ ಮಷಿನ್) ನಂಬರ್'ಗಳು.

ನವದೆಹಲಿ(ಫೆ.21): ನಿಮ್ಮ 10 ಸಂಖ್ಯೆಯ ನಂಬರ್'ಗಳೆಲ್ಲವೂ ಜುಲೈ 1ರಿಂದ 13 ಸಂಖ್ಯೆಗಳಾಗಲಿವೆ ಎಂಬ ದೂರಸಂಪರ್ಕ ಇಲಾಖೆಯ ಆದೇಶವೊಂದು ದೇಶದ ಕೊಟ್ಯಂತರ ಮೊಬೈಲ್ ಬಳಕೆದಾರರಲ್ಲಿ ಸಂಚಲನ ಮೂಡಿಸಿದೆ.

ಆದರೆ ಕೆಲವು ಮಾಧ್ಯಮಗಳು ದೂರ ಸಂಪರ್ಕ ಇಲಾಖೆಯ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ಗೊಂದಲ ಉಂಟಾಗಿದೆ. ವಾಸ್ತವದಲ್ಲಿ 13 ನಂಬರ್'ಗಳಾಗಿ ಬದಲಾಗುವುದು ಎಂ2ಎಂ(ಮಷಿನ್ ನಿಂದ ಮಷಿನ್) ನಂಬರ್'ಗಳು. ಈ ರೀತಿಯ ನಂಬರ್'ಗಳನ್ನು ಸ್ವೈಪ್ ಮಷಿನ್, ಕಾರುಗಳು, ವಿದ್ಯುತ್ ಮೀಟರ್'ಗಳು ಮುಂತಾದವುಗಳಲ್ಲಿ ಬಳಸಲಾಗುತ್ತದೆ.

ಪ್ರಮುಖ ದೂರ ಸಂಪರ್ಕ ಇಲಾಖೆಗಳಾದ ಏರ್'ಟೆಲ್, ಜಿಯೋ ಹಾಗೂ ದೂರಸಂಪರ್ಕ ಇಲಾಖಾ ಸಂಸ್ಥೆ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಯಾವುದೇ ನಂಬರ್'ಗಳು ಬದಲಾಗುವುದಿಲ್ಲ ಎಂದು ತಿಳಿಸಿವೆ. ಎಂ2ಎಂ ಮೊಬೈಲ್'ಗಳು ಅಕ್ಟೋಬರ್ 1, 2018ರಿಂದ ಆರಂಭಗೊಂಡು ಡಿಸೆಂಬರ್ 31ರೊಳಗೆ 13 ನಂಬರ್'ಗಳಾಗಿ ಬದಲಾಗಲಿವೆ.

ಎಂ2ಎಂ ಎಂದರೇನು ?

ಎಂ2ಎಂ ತಂತ್ರಜ್ಞಾನವು ವೈರ್'ಲೆಸ್ ನೆಟ್'ವರ್ಕ್ ಮೂಲಕ ರಿಮೋಟ್ ಕಾರ್ಯಸಾಧಿಸುವ ಸಾಧನಗಳು ಅಥವಾ ಪ್ರತಿಯೊಂದಕ್ಕೂ ಮಾತನಾಡಲು ಸಂಪರ್ಕ ಸಾಧಿಸುವ ತಂತ್ರಜ್ಞಾನವಾಗಿದೆ. ಟೆಲಿಕಾಂ ಸಂಸ್ಥೆಗಳು ಸಿಮ್ ಆಧಾರಿತ ಎಂ2ಎಂ ಸೇವೆಗಳನ್ನು ಸ್ಮಾರ್ಟ್ ವಿದ್ಯುತ್ ಮೀಟರ್'ಗಳು, ವಾಹನಗಳ ಟ್ರ್ಯಾಕಿಂಗ್ ಮತ್ತು ಇಂಧನ ಮೇಲ್ವಿಚಾರಣಾ ವ್ಯವಸ್ಥೆ ಮತ್ತು ಟ್ರಾಫಿಕ್ ನಿರ್ವಹಣಾ ಪರಿಹಾರದ ರೂಪದಲ್ಲಿ ಗ್ರಾಹಕರಿಗೆ ನೀಡಲು ಆರಂಭಿಸಿವೆ.

loader