Asianet Suvarna News Asianet Suvarna News

ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ ಸೂಕ್ತವಲ್ಲ

ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡುವ ಅಗತ್ಯವಿಲ್ಲ, ಹೈವೋಲ್ಟೇಜ್‌ನಲ್ಲಿ ಪೂರ್ತಿಯಾಗುವವರೆಗೆ ಚಾರ್ಜ್ ಮಾಡುವುದು ಬ್ಯಾಟರಿ ಮೇಲೆ ಒತ್ತಡ ಹಾಕಿದಂತಾಗುತ್ತದೆ

Night Mobile Charging Not Good

ನಿಮ್ಮ ಮೊಬೈಲ್ ಬ್ಯಾಟರಿ ಸಶಕ್ತವಾಗಿರಬೇಕು ಎಂಬ ಕಾರಣಕ್ಕೆ ರಾತ್ರಿಯಿಡೀ ಮೊಬೈಲನ್ನು ಚಾರ್ಜಿಗೆ ಇರಿಸಿ ನಿಶ್ಚಿಂತೆಯಿಂದ ನಿದ್ರೆ ಮಾಡುತ್ತೀರಾ? ಈ ವಿಧಾನ ಸರಿಯಲ್ಲ.

ಇತ್ತೀಚೆಗೆ ನಿಯತಕಾಲಿಕವೊಂದಕ್ಕೆ ನೀಡಿದ ಮಾಹಿತಿಯಲ್ಲಿ ಕ್ಯಾಡೆಕ್ಸ್ ಬ್ಯಾಟರಿ ಕಂಪನಿ ಈ ಕುರಿತು ಮುಖ್ಯ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡುವ ಅಗತ್ಯವಿಲ್ಲ, ಹೈವೋಲ್ಟೇಜ್‌ನಲ್ಲಿ ಪೂರ್ತಿಯಾಗುವವರೆಗೆ ಚಾರ್ಜ್ ಮಾಡುವುದು ಬ್ಯಾಟರಿ ಮೇಲೆ ಒತ್ತಡ ಹಾಕಿದಂತಾಗುತ್ತದೆ ಎಂದು ಅದು ಮಾಹಿತಿ ನೀಡಿದೆ. ಬಹುತೇಕ ಫೋನ್‌ಗಳಲ್ಲಿ ಲೀಥಿಯಂ ಇಯಾನ್ ಬ್ಯಾಟರಿಗಳಿದ್ದು, ಕಾಲಕ್ರಮೇಣ ಇವು ಕೆಡುತ್ತವೆ. ಇದರಿಂದ ಅನಗತ್ಯ ಒತ್ತಡ ಬ್ಯಾಟರಿ ಮೇಲೆ ಬೀಳುತ್ತದೆ. ಆದ್ದರಿಂದ ಬ್ಯಾಟರಿ ಚಾರ್ಜ್ ಮಟ್ಟ ಶೇ. 100

ತಲುಪಿದ ತಕ್ಷಣ ಪ್ಲಗ್ಗಿನಿಂದ ಸಾಕೆಟ್ ತೆಗೆಯಬೇಕು ಎಂದು ಕ್ಯಾಡೆಕ್ಸ್ ಸಲಹೆ ನೀಡಿದೆ. ಬ್ಯಾಟರಿ ಆಯುಷ್ಯ ಹೆಚ್ಚಿಸುವ ಉದ್ದೇಶದಿಂದ ಕ್ಯಾಡೆಕ್ಸ್ ನೀಡಿರುವ ಇತರ ಸಲಹೆಗಳೆಂದರೆ: ಆದಷ್ಟು ಮಟ್ಟಿಗೆ ಲ್ಯಾಪ್‌ಟಾಪ್ ಇತ್ಯಾದಿ ಪರ್ಯಾಯ ವ್ಯವಸ್ಥೆಗಳಿಂದ ಚಾರ್ಜ್ ಮಾಡುವ ಬದಲು ಪ್ರಧಾನ ಪ್ಲಗ್‌ನಿಂದಲೇ ಚಾರ್ಜ್ ಮಾಡಿ.

Follow Us:
Download App:
  • android
  • ios