ಯಾವುದೇ ಪೋಸ್ಟ್'ನ ಕೇವಲ ತಲೆಬರಹವನ್ನು ಓದಿ ನಿಮ್ಮ ಫೇಸ್'ಬುಕ್ ವಾಲ್ ಮೇಲೂ ಶೇರ್ ಮಾಡಿಕೊಳ್ಳುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಎಚ್ಚರ ಇನ್ಮುಂದೆ ನೀವು ಯಾವುದೇ ಪೋಸ್ಟ್'ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ.

ಯಾವುದೇ ಪೋಸ್ಟ್'ನ ಕೇವಲ ತಲೆಬರಹವನ್ನು ಓದಿ ನಿಮ್ಮ ಫೇಸ್'ಬುಕ್ ವಾಲ್ ಮೇಲೂ ಶೇರ್ ಮಾಡಿಕೊಳ್ಳುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಎಚ್ಚರ ಇನ್ಮುಂದೆ ನೀವು ಯಾವುದೇ ಪೋಸ್ಟ್'ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ.

ವಾಸ್ತವವಾಗಿ ಕೇವಲ ಆಕರ್ಷಕ ಹೆಡ್'ಲೈನ್ ಕಂಡು ಪೋಸ್ಟ್ ಶೇರ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸುಳ್ಳು ಸುದ್ದಿಗಳು ಅತಿ ಹೆಚ್ಚು ಶೇರ್ ಆಗುತ್ತಿವೆ. ಈ ಕಾರಣದಿಂದಾಗಿಯೇ ಇಂತಹ ಸಧ್ಯದಲ್ಲೇ ಇಂತಹ ಮಹತ್ವದ ಕ್ರಮ ಕೈಗೊಳ್ಳಲು ಫೇಸ್'ಬುಕ್ ನಿರ್ಧರಿಸಿದೆ.

ಇಂತಹ ಸುಳ್ಳು ಸುದ್ದಿಗಳನ್ನು ತಡೆಯಲು ಫೇಸ್'ಬುಕ್ ಇದೀಗ ಹೊಸತೊಂದು ಉಪಾಯವನ್ನು ಕಂಡುಕೊಂಡಿದ್ದು ಇನ್ಮುಂದೆ ಕೇವಲ ತಲೆಬರಹ ನೋಡಿ ಸುದ್ದಿಯೊಂದನ್ನು ಶೇರ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಗ್ರಾಹಕ ತಾನು ಓದಿದ ಸುದ್ದಿ ಅಥವಾ ಕಂಟೆಂಟ್'ನ್ನು ಶೇರ್ ಮಾಡ ಬಯಸಿದರೆ ಆತ ಮೊದಲು ಅದನ್ನು ಸಂಪೂರ್ಣವಾಗಿ ಓದಬೇಕಾಗುತ್ತದೆ. ಫೇಸ್'ಬುಕ್ ಹೊಸ ತಂತ್ರಜ್ಞಾನದ ಪ್ರಯೋಗ ಮಾಡಲಿದ್ದು, ಇದರಲ್ಲಿ 'ಥರ್ಡ್ ಪಾರ್ಟಿ ಫ್ಯಾಕ್ಟ್ಸ್ ಚೆಕರ್'ನ ಮೂಲಕ ಫ್ಲ್ಯಾಗ್ಡ್ ಸುದ್ದಿಗಳನ್ನು ಕಳುಹಿಸಲಾಗುತ್ತದೆ.

ಒಂದು ವೇಳೆ ಈ ಫ್ಯಾಕ್ಟ್ಸ್ ಚೆಕರ್'ಗೆ ಸುದ್ದಿಯೊಂದು ಸುಳ್ಳೆಂಬ ಅನುಮಾನ ಮೂಡಿದರೆ ಆ ಸುದ್ದಿಗೆ ಕಡಿಮೆ ಮಹತ್ವ ನೀಡುತ್ತದೆ. ಈ ಮೂಲಕ ಆ ಸುದ್ದಿಯನ್ನು ಕಡಿಮೆ ಜನರು ನೋಡಬಹುದಷ್ಟೇ. ಸದ್ಯ ಇದನ್ನು ಜರ್ಮನಿಯಲ್ಲಿ ಪ್ರಯೋಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಗತ್ತಿನಾದ್ಯಂತ ಪ್ರಯೋಗಿಸಲಾಗುತ್ತದೆ.

ಓದದೇ ಪೋಸ್ಟ್'ಗಳನ್ನು ಶೇರ್ ಮಾಡುತ್ತಾರೆ

ವರದಿಯೊಂದರ ಅನ್ವಯ ಫೇಸ್'ಬುಕ್'ನ ಶೇ. 60% ಗ್ರಾಹಕರು ಕೇವಲ ತಲೆಬರಹ ನೋಡಿ ಸುದ್ದಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಯಾವೊಬ್ಬ ಬಳಕೆದಾರನೂ ಸುದ್ದಿಯನ್ನು ಸಂಪೂರ್ಣವಾಗಿ ಓದುವುದಿಲ್ಲ. ಓದಿದರೂ ಕೇವಲ ಒಂದು ಅಥವಾ ಎರಡು ಸಾಲುಗಳನ್ನು ಓದುತ್ತಾರೆ. ಇದೇ ಕಾರಣದಿಂದ ಸುಳ್ಳು ಸುದ್ದಿಗಳು ಬಹಳ ವೇಗವಾಗಿ ಹಬ್ಬುತ್ತಿವೆ.

ಚೆಕಿಂಗ್ ಹೇಗಾಗುತ್ತದೆ?

ನಿಮ್ಮ ಗೆಳೆಯ/ಗೆಳತಿ ಯಾವುದಾದರೂ ಪೋಸ್ಟ್ ಶೇರ್ ಮಾಡಿದರೆ ಅದರಲ್ಲಿ 3 ಇಂಡಿಕೇಟರ್ ನಿಮಗೆ ಕಾಣಿಸಿಕೊಳ್ಳುತ್ತದೆ. ಮೊದಲನೆಯ ಇಂಡಿಕೇಟರ್'ನಲ್ಲಿ ಎಷ್ಟು ಮಂದಿ ಆ ಕ್ಷಣ ಆ ಸುದ್ದಿಯನ್ನು ಓದುತ್ತಿದ್ದಾರೆ ಎಂದು ನೋಡಬಹುದು. ಎರಡನೆಯದರಲ್ಲಿ ಆ ಕ್ಷಣ ನಿಮ್ಮ ಪ್ರೆಂಡ್ ಆಗಿರುವವರಲ್ಲಿ ಎಷ್ಟು ಜನರು ಫೇಸ್'ಬುಕ್'ನಲ್ಲಿದ್ದಾರೆ ಎಂದು ತಿಳಿಯುತ್ತದೆ. ಮೂರನೆಯದಾಗಿ ನಿಮ್ಮ ಗೆಳೆಯರಲ್ಲಿ ಎಷ್ಟು ಮಂದಿ ಆ ಸುದ್ದಿಯನ್ನು ಓದುತ್ತಿದ್ದಾರೆ ಎಂದು ತಿಳಿಯಲಿದೆ. ಈ ಮೂರೂ ಇಂಡಿಕೇಟರ್'ಗಳ ಫಲಿತಾಂಶ ಸೇರಿಸಿ ಹೊಸತೊಂದು ಮ್ಯಾಟ್ರಿಕ್ಸ್ ತಯಾರಾಗುತ್ತದೆ ಇದರಲ್ಲಿ ಜಗತ್ತಿನಾದ್ಯಂತ ಒಂದು ಸುದ್ದಿಯನ್ನು ಎಷ್ಟು ಮಂದಿ ಸಂಪೂರ್ಣವಾಗಿ ಓದಿದ್ದಾರೆ ಎಂದು ತಿಳಿಯಲಿದೆ.