ಬೆಂಗಳೂರು(ಸೆ.07): ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಕಾರು BMW ಜೆಡ್4 ಕಾರಿಗೆ ಪೈಪೋಟಿ ನೀಡಲು ಹೊರಟಿದೆಯಾ? ಇಂತಹ ಒಂದು ಪ್ರಶ್ನೆ ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ , ಆಕರ್ಷ ವಿನ್ಯಾಸ, ಆಧುನಿಕ ತಂತ್ರಜ್ಞಾನಗಳಿಂದ ಮಾರುತಿ ಸುಜುಕಿ ಭಾರತದ ಕಾರು ಪ್ರೀಯರ ಮನಗೆದ್ದಿದೆ. ಇದೀಗ BMW ಜೆಡ್4 ಕಾರಿಗೆ ಪ್ರತಿಸ್ಪರ್ಧಿಯಾಗಿ ಸ್ವಿಫ್ಟ್ ಕಾರು ಬಿಡುಗಡೆಯಾಗುತ್ತಾ ಅನ್ನೋ ಕುತೂಹಲ ಗ್ರಾಹಕರನ್ನ ಕಾಡುತ್ತಿದೆ.

BMW ಜೆಡ್4 ಕಾರಿಗೆ ಪ್ರತಿಸ್ಪರ್ಧಿಯಾಗಿ  ಈ ಸ್ಪಿಫ್ಟ್ ಕಾರನ್ನ ಡಿಸೈನ್ ಮಾಡಲಾಗಿದೆ. ಈ ಮಟ್ಟಕ್ಕೆ ಸ್ವತಃ ಮಾರುತಿ ಸುಜುಕಿ ಕಂಪೆನಿ ಯೋಚನೆಯೇ ಮಾಡಿಲ್ಲ. ಆದರೆ ಈ ಅದ್ಬುತ ಡಿಸೈನ್ ಮಾಡಿದ್ದು, ಹಂಗೇರಿ ಮೂಲದ ಎಕ್ಸ್ ಟೋಮಿ ಡಿಸೈನ್ ತನ್ನ ಫೇಸ್ ಬುಕ್ ಪೇಜ್‍‌ನಲ್ಲಿ ಸ್ವಿಫ್ಟ್ ಕಾರಿನ ನೂತನ ಡಿಸೈನ್ ಮಾಡಿ ಪೋಸ್ಟ್ ಮಾಡಲಾಗಿದೆ.

ಪೆಬೆಲ್ ಬೀಚ್ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾದ BMW ಜೆಡ್4 ಕಾರಿಗೆ ಪ್ರತಿಸ್ಪರ್ಧಿಯಾಗಿ ಈ ಕಾರಿನ ಡಿಸೈನ್ ಮಾಡಲಾಗಿದೆ. 2 ಸೀಟ್, 2 ಡೋರ್, ರೋಡ್‌ಸ್ಟರ್ ಕಾರನ್ನ ಮಾರುತಿ ಸುಜುಕಿ ನಿರ್ಮಾಣ ಮಾಡಿದರೆ, ಗರಿಷ್ಠ ಮಾರಾಟವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.