ನವದೆಹಲಿ(ಅ.01): ಮಾರುತಿ ಸುಜುಕಿ ಸಂಸ್ಥೆಯ ವಿಟಾರ ಬ್ರಿಜಾ SUV ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದೀಗ ವಿಟಾರ ಬ್ರಿಜಾ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಂಗೇರಿಯಲ್ಲಿ ನೂತನ ವಿಟಾರ ಬ್ರಿಜಾ ನಿರ್ಮಾಣ ಭರದಿಂದ ಸಾಗಿದೆ.

ನೂತನ ವಿಟಾರ ಬ್ರಿಜಾ ಕಾಂಪ್ಯಾಕ್ಟ್ SUV ಕಾರು ಇದೀಗ ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿದೆ. ಹಿಂದಿನ ಬ್ರಿಜಾಗಿಂತ ಗಾತ್ರ ಹಾಗೂ ಸಾಮರ್ಥ್ಯದಲ್ಲಿ ಮುಂದಿದೆ.

ಮುಂಭಾಗದ ಗ್ರಿಲ್ ಹಾಗೂ ಬಂಪರ್, 17 ಇಂಚಿನ ಆಲೋಯ್ ವೀಲ್ಸ್, ಎಲ್ಇಡಿ ಎಲಿಮೆಂಟ್ಸ್ ಲೈಟ್ಸ್, ಬ್ಲಾಕ್ ರೂಫ್ ಸೇರಿದಂತೆ ಹಲವು ವಿಶೇಷತೆಗಳನ್ನ ಒಳಗೊಂಡಿದೆ. 2019ರಲ್ಲಿ ನೂತನ ವಿಟಾರ ಬ್ರಿಜಾ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.