ಬೆಂಗಳೂರು(ಜು.30): ಹೊಂಡಾ ಕಾರು ಸಂಸ್ಥೆಯ ಬಹುನಿರೀಕ್ಷಿತ ಹೊಂಡಾ ಸಿಆರ್‌-ವಿ ಕಾರು ಬಿಡುಗಡೆಗೆ ಸಿದ್ದವಾಗಿದೆ. 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಪ್ರದರ್ಶನಗೊಂಡ ಹೊಂಡಾ ಸಿಆರ್‌-ವಿ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಹೊಂಡಾ ಸಿಆರ್-ವಿ ಕಾರು 7 ಸೀಟರ್ ಹೊಂದಿದೆ. ಈ ಮೂಲಕ ಫೋರ್ಡ್ ಎಂಡೆವರ್, ಟೊಯೊಟಾ ಫಾರ್ಚುನರ್, ಇಸುಜು ಎಮ್‌ಯು-ಎಕ್ಸ್, ಸ್ಕೋಡಾ ಕೊಡಿಯಾಗ್ ಹಾಗೂ ಫೋಕ್ಸ್‌ವ್ಯಾಗನ್ ಟಿಗ್ವುನ್‌ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಸಿಆರ್-ವಿ ಕಾರಿನ ಬೆಲೆ 26 ಲಕ್ಷ ರೂಪಾಯಿಂದ ಆರಂಭಗೊಂಡ 30 ಲಕ್ಷ ರೂಪಾಯಿವರೆಗೆ ಇರಲಿದೆ. ಡೀಸೆಲ್ ಇಂಜಿನ್ ಕಾರು 1.6 ಲೀಟರ್ ಇಂಜಿನ್ ಹೊಂದಿದೆ. 120 ಹಾರ್ಸನ್ ಹಾಗೂ 300 ಎನ್‌ಎಮ್ ಟಾರ್ಕ್ಯೂ ಉತ್ವಾದಿಸಲಿದೆ. ಪೆಟ್ರೋಲ್ ವರ್ಶನ್ ಕಾರು 2.4 ಲೀಟರ್, 4 ಸಿಲಿಂಡರ್ ಇಂಜಿನ್ ಹಾಗೂ 184 ಬಿಹೆಚ್‌ಪಿ ಪವರ್ ಹೊಂದಿದೆ.