ಸಂದೇಶ ರವಾನೆ ಆ್ಯಪ್ ವಾಟ್ಸಪ್‌ನಲ್ಲಿ ಬಳಕೆದಾರರು ಇನ್ನು ಮುಂದೆ ಕೇವಲ ಕರೆಯಷ್ಟೇ ಅಲ್ಲ,ಗುಂಪಿನ ಸದಸ್ಯರ ಜೊತೆ ಕಾನ್ಫರೆನ್ಸ್ (ಒಮ್ಮೆಗೆ ಹಲವರೊಂದಿಗೆ ಒಟ್ಟುಗೂಡಿ) ಕರೆಗಳನ್ನು ಕೂಡ ಮಾಡಬಹುದಾಗಿದೆ.

ನವದೆಹಲಿ: ಸಂದೇಶ ರವಾನೆ ಆ್ಯಪ್ ವಾಟ್ಸಪ್‌ನಲ್ಲಿ ಬಳಕೆದಾರರು ಇನ್ನು ಮುಂದೆ ಕೇವಲ ಕರೆಯಷ್ಟೇ ಅಲ್ಲ,ಗುಂಪಿನ ಸದಸ್ಯರ ಜೊತೆ ಕಾನ್ಫರೆನ್ಸ್ (ಒಮ್ಮೆಗೆ ಹಲವರೊಂದಿಗೆ ಒಟ್ಟುಗೂಡಿ) ಕರೆಗಳನ್ನು ಕೂಡ ಮಾಡಬಹುದಾಗಿದೆ.

ವಾಟ್ಸಪ್ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಹೋದ್ಯೋಗಿಗಳೊಂದಿಗೆ ಧ್ವನಿ ಮತ್ತು ವಿಡಿಯೋ ಕರೆಗಳನ್ನು ಮಾಡು ವ ಅವಕಾಶ ಶೀಘ್ರದಲ್ಲೇ ಲಭ್ಯವಾಗಲಿದೆ.

ಮುಂದಿನ ಅಪ್‌ಡೇಟ್‌ನಲ್ಲಿ ವಾಟ್ಸಪ್ ಗಂಪು ಕರೆ ಮಾಡುವ ಸೌಲಭ್ಯವನ್ನು ನೀಡಲಿದೆ. 2.17.70 ಅಪ್‌ಡೇಟ್ ಮೂಲಕ ಈ ಸೌಲಭ್ಯ ಲಭ್ಯವಾಗಲಿದೆ.

ಅಲ್ಲದೇ ಸಂದೇಶಗಳನ್ನು ಅನ್‌ಸೆಂಡ್ ಮತ್ತು ಡಿಲೀಟ್ ಮಾಡುವ ಆಯ್ಕೆಯನ್ನೂ ಪರೀಕ್ಷಿಸಿದೆ ಎಂದು ವರದಿಗಳು ತಿಳಿಸಿವೆ.