ವಾಷಿಂಗ್ಟನ್(ಮೇ.14): ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ಮೇಲೆ ಕಳುಹಿಸಲು ನಾಸಾ ಸಿದ್ಧತೆ ನಡೆಸುತ್ತಿದೆ.

ನಾಸಾದ ಮೂನ್ ಮಿಶನ್‌ಗಾಗಿ 2020ನೇ ಆರ್ಥಿಕ ವರ್ಷದಲ್ಲಿ 1.6 ಬಿಲಿಯನ್ ಅಮೆರಿಕನ್ ಡಾಲರ್ ಬಿಡುಗಡೆಗೊಳಿಸಲು ಟ್ರಂಪ್ ಸರ್ಕಾರ ಅನುಮೋದನೆ ನೀಡಿದೆ. ಈ ಬಾರಿ ಮಹಿಳಾ ಗಗನಯಾತ್ರಿಯೋರ್ವರು ಚಂದ್ರನ ಮೇಲೆ ಇಳಿಯಲಿದ್ದಾರೆ ಎಂದು ನಾಸಾ ಸ್ಪಷ್ಟಪಡಿಸಿದೆ.

2024ರಲ್ಲಿ ಚಂದ್ರನ ದಕ್ಷಿಣ ಧೃವದ ಮೇಲೆ ಪರುಷ ಹಾಗೂ ಮಹಿಳಾ ಗಗನಯಾತ್ರಿಗಳನ್ನು ಇಳಿಸಲು ನಾಸಾ ಯೋಜನೆ ಸಿದ್ಧವಾಗಿದ್ದು, ಇದಕ್ಕಾಗಿ ನಾಸಾದ ತರಬೇತಿ ಕಾರ್ಯಾಗಾರದಲ್ಲಿ ಗಗನಯಾತ್ರಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಎನ್ನಲಾಗಿದೆ.