ಲ್ಯಾಂಡಿಗ್ ಹಾರ್ಡ್ ಆಗಿತ್ತು: ವಿಕ್ರಂ ಬಿದ್ದ ಜಾಗ ನಾಸಾ ಕೊನೆಗೂ ಗುರುತಿಸಿತು!
ಕೊನೆಗೂ ವಿಕ್ರಂ ಲ್ಯಾಂಡರ್ ಬಿದ್ದ ಸ್ಥಳ ಗುರುತಿಸಿದ ನಾಸಾ| ಚಂದ್ರನ ದಕ್ಷಿಣ ಧೃವ ಪ್ರದೇಶದ ಫೋಟೋ ಸೆರೆ ಹಿಡಿದ ನಾಸಾ| ಅಂತಿಮ ಕ್ಷಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿರುವುದೇ ಸಂಪರ್ಕ ಕಡಿತಕ್ಕೆ ಕಾರಣ ಎಂದ ನಾಸಾ| ನಾಸಾದ ಚಂದ್ರ ವಿಚಕ್ಷಣ ಆರ್ಬಿಟರ್(LRO)ಮೂಲಕ ಫೋಟೋ ಸೆರೆ|
ವಾಷಿಂಗ್ಟನ್(ಸೆ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೋದ ವಿಕ್ರಂ ಲ್ಯಾಂಡರ್, ಚಂದ್ರನ ಅಂಗಳದಲ್ಲಿ ಬಿದ್ದಿರುವ ಪ್ರದೇಶವನ್ನು ನಾಸಾ ಗುರುತಿಸಿದೆ.
ವಿಕ್ರಂ ಲ್ಯಾಂಡರ್ ಬಿದ್ದಿದೆ ಎನ್ನಲಾದ ಚಂದ್ರನ ಮೇಲ್ಮೈ ಪ್ರದೇಶದ ಫೋಟೋ ಬಿಡುಗಡೆ ಮಾಡಿರುವ ನಾಸಾ, ಅಂತಿಮ ಕ್ಷಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿರುವುದೇ ಸಂಪರ್ಕ ಕಡಿತಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದೆ.
ನಾಸಾದ ಚಂದ್ರ ವಿಚಕ್ಷಣ ಆರ್ಬಿಟರ್(LRO)ಮೂಲಕ ಸೆರೆ ಹಿಡಿದಿರುವ ಫೋಟೋಗಳಲ್ಲಿ ವಿಕ್ರಂ ಲ್ಯಾಂಡರ್ ಬಿದ್ದ ಕರಾರುವಕ್ಕಾದ ಸ್ಥಳ ಗುರುತಿಸಲು ಸಾಧ್ಯವಾಗಿಲ್ಲವಾದರೂ, ಚಂದ್ರನ ದಕ್ಷಿಣ ಭಾಗದ ಸುತ್ತಲಿನ ಪ್ರದೇಶವನ್ನು ಸೆರೆ ಹಿಡಿಯಲಾಗಿದೆ.