ಪ್ರಧಾನಿ ನರೇಂದ್ರ ಮೋದಿ ಬಳಿ ಸ್ವಂತ ಕಾರು ಇದೆಯಾ? ಈ ಪ್ರಶ್ನೆಗೆ ಪ್ರಧಾನಿ ಕಾರ್ಯಲಾಯ ಉತ್ತರ ನೀಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿ ಕುರಿತು ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

ನವದೆಹಲಿ(ಸೆ.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿ 2019ರ ಮೇ ತಿಂಗಳಲ್ಲಿ ಅಂತ್ಯವಾಗಲಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು 2019ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಶಸ್ವಿ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಒಟ್ಟು ಆಸ್ತಿ 2 ಕೋಟಿ ರೂಪಾಯಿ. ಆದರೆ ಮೋದಿ ಬಳಿ ಸ್ವಂತ ಕಾರು ಅಥವಾ ಬೈಕ್ ಇದೆಯಾ ಅನ್ನೋ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ ಉತ್ತರ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಯಾವುದೇ ಸ್ವಂತ ಕಾರು ಅಥವಾ ಬೈಕ್ ಹೊಂದಿಲ್ಲ. ಮೋದಿ ಬಳಿ 48,944 ರೂಪಾಯಿ ನಗದು ಇಟ್ಟುಕೊಂಡಿದ್ದಾರೆ. ಇನ್ನು ಸ್ಟೇಟ್ ಬ್ಯಾಂಕ್‌ನಲ್ಲಿ 11,29,690 ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ಇನ್ನೊಂದು ಎಸ್‌ಬಿಐ ಅಕೌಂಟ್‌ನಲ್ಲಿ 1,07,96,288 ರೂಪಾಯಿ ಇಟ್ಟಿದ್ದಾರೆ.

1,38,060 ರೂಪಾಯಿ ಬೆಲೆ ಬಾಳುವ 4 ಆಭರಣಗಳನ್ನ ಹೊಂದಿದ್ದಾರೆ. ಇನ್ನು ಗುಜಾರತ್‌ನ ಗಾಂಧಿನಗರದಲ್ಲಿ ರೆಸಿಡೆನ್ಶಿಯಲ್ ಬಿಲ್ಡಿಂಗ್‌ನಲ್ಲಿ 4ನೇ 1 ಭಾಗ ಶೇರು ಹೊಂದಿದ್ದಾರೆ. 2002ರಲ್ಲಿ ಈ ಆಸ್ತಿಯನ್ನ ಮೋದಿ 1,30,488 ರೂಪಾಯಿಗೆ ಖರೀದಿಸಿದ್ದರು. ಇದರ ಸದ್ಯದ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ ಎಂದು ಪ್ರಧಾನಿ ಕಾರ್ಯಾಲಯ ಆಸ್ತಿ ವಿವರಗಳನ್ನ ಬಹಿರಂಗ ಪಡಿಸಿದೆ.