ಹೊಂಡಾ CR-V ಕಾರು ಬಿಡುಗಡೆ- 7ಸೀಟರ್ ಕಾರಿನ ವಿಶೇಷತೆ ಏನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Oct 2018, 3:19 PM IST
Most expected 2018 Honda CR-V Launch Tomorrow
Highlights

ಹೊಂಡಾ ಸಂಸ್ಥೆಯ ನೂತನ ಕಾರು CR-V ನಾಳೆ ಬಿಡುಗಡೆಯಾಗಲಿದೆ. ಅತ್ಯಾಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಸೇಫ್ಟಿ ಫೀಚರ್ಸ್ ಹೊಂದಿರುವ ಹೊಂಡಾ CR-V ಕಾರಿನ ವಿಶೇಷತೆ ಏನು? ಇಲ್ಲಿದೆ.

ಬೆಂಗಳೂರು(ಅ.08): ಹೊಂಡಾ ಕಾರು ಸಂಸ್ಥೆಯ ಬಹುನಿರೀಕ್ಷಿತ ಹೊಂಜಾ CR-V ಕಾರು ನಾಳೆ(ಅ.09) ಬಿಡುಗಡೆಯಾಗಲಿದೆ. 7 ಸೀಟರ್ ಕಾರು SUV ಕಾರು 1.6 ಲೀಟರ್ ಡೀಸೆಲ್ ಹಾಗೂ 2.0 ಲೀಟರ್ ಪೆಟ್ರೋಲ್ ಇಂಜಿನ್‌ಗಳಲ್ಲಿ ಲಭ್ಯವಿದೆ.

7ಸೀಟರ್ ಹೊಂಡಾ CR-V ಕಾರು ಫೋರ್ಡ್ ಎಂಡೆವರ್, ಟೊಯೊಟಾ ಫಾರ್ಚುನರ್, ಹ್ಯುಂಡೈ ಟಕ್ಸನ್,  ಇಸುಜು ಎಮ್‌ಯು-ಎಕ್ಸ್, ಸ್ಕೋಡಾ ಕೊಡಿಯಾಗ್ ಹಾಗೂ ಫೋಕ್ಸ್‌ವ್ಯಾಗನ್ ಟಿಗ್ವುನ್‌ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಸಿಆರ್-ವಿ ಕಾರಿನ ಬೆಲೆ 25 ಲಕ್ಷ ರೂಪಾಯಿಂದ ಆರಂಭಗೊಂಡ 31 ಲಕ್ಷ ರೂಪಾಯಿವರೆಗೆ ಇರಲಿದೆ. ಡೀಸೆಲ್ ಇಂಜಿನ್ ಕಾರು 1.6 ಲೀಟರ್ ಇಂಜಿನ್ ಹೊಂದಿದೆ. 120 ಹಾರ್ಸನ್ ಹಾಗೂ 300 ಎನ್‌ಎಮ್ ಟಾರ್ಕ್ಯೂ ಉತ್ವಾದಿಸಲಿದೆ. ಪೆಟ್ರೋಲ್ ವರ್ಶನ್ ಕಾರು 2.4 ಲೀಟರ್, 4 ಸಿಲಿಂಡರ್ ಇಂಜಿನ್ ಹಾಗೂ 184 ಬಿಹೆಚ್‌ಪಿ ಪವರ್ ಹೊಂದಿದೆ.

loader