ಉತ್ತಮ ಸೇವೆ ಒದಗಿಸುವ ಸಲುವಾಗಿ ಕಂಪನಿಯು ಕೆಲ ಬದಲಾವಣೆಗಳನ್ನು ಅನುಷ್ಠಾನಗೊಳಿಸಲು, ಮಾರಾಟ ಹಾಗೂ ಮಾರುಕಟ್ಟೆ ಇಲಾಖೆಯಲ್ಲಿ 4 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ'

ನವದೆಹಲಿ(ಜು.07): ಸಾಫ್ಟ್'ವೇರ್ ದಿಗ್ಗಜ ಸಂಸ್ಥೆ ಮೈಕ್ರೋ'ಸಾಫ್ಟ್ ಅಮೆರಿಕಾ ಹೊರಗಿನ ದೇಶಗಳಲ್ಲಿ 4 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.

ಮೈಕ್ರೋಸಾಫ್ಟ್ ವಕ್ತಾರರು ಈ ಬಗ್ಗೆ ತನ್ನ ಕಂಪನಿಯ ಉದ್ಯೋಗಿಗಳಿಗೆ ಇಮೇಲ್ ಮಾಡಿದ್ದು' ತನ್ನ ಗ್ರಾಹಕರು ಹಾಗೂ ಪಾಲುದಾರರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಕಂಪನಿಯು ಕೆಲ ಬದಲಾವಣೆಗಳನ್ನು ಅನುಷ್ಠಾನಗೊಳಿಸಲು, ಮಾರಾಟ ಹಾಗೂ ಮಾರುಕಟ್ಟೆ ಇಲಾಖೆಯಲ್ಲಿ 4 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥೆಯು ವಿಶ್ವದಾದ್ಯಂತ 121,000 ಉದ್ಯೋಗಿಗಳನ್ನು ಹೊಂದಿದ್ದು, ಇವರಲ್ಲಿ 71,000 ಮಂದಿ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.