Asianet Suvarna News Asianet Suvarna News

ಕೈಗೆಟಕುವ ದರದಲ್ಲಿ ಮೈಕ್ರೋಮ್ಯಾಕ್ಸ್‌ನಿಂದ 2 ಹೊಸ ಮೊಬೈಲ್‌ಗಳು!

ದೀಪಾವಳಿ ಬಂದಿದೆ. ಹೊಸ ಮೊಬೈಲ್ ಖರೀದಿಸುವವರಿಗೆ ಸುಗ್ಗಿಕಾಲ ಬಂದಿದೆಯೆನ್ನಬಹುದು. ಕೈಗೆಟಕುವ ದರದಲ್ಲಿ ಮೊಬೈಲ್ ಒದಗಿಸುವ ಮೈಕ್ರೋಮ್ಯಾಕ್ಸ್ ಇದೀಗ 2 ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ.

Micromax Bharat 5 Infinity  Bharat 4 Diwali Editions Launched in India
Author
Bengaluru, First Published Oct 31, 2018, 9:50 AM IST

ಕೈಗೆಟಕುವ ದರದ ಫೋನ್‌ಗಳಿಗಾಗಿ ಪ್ರಸಿದ್ಧವಾದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪನಿಯು ಇದೀಗ ದೀಪಾವಳಿ ಪ್ರಯುಕ್ತ 2 ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿರುವ ಭಾರತ್ -5 ಇನ್ಫಿನಿಟಿ ಮತ್ತು ಭಾರತ್-4 ದೀಪಾವಳಿ ಎಡಿಶನ್ ಫೋನ್‌ಗಳು ಆ್ಯಂಡ್ರಾಯಿಡ್ ತಂತ್ರಜ್ಞಾನಾಧಾರಿತವಾಗಿದ್ದು ಓರಿಯೋ ಗೋ ತಂತ್ರಾಶದ ಮೇಲೆ ಕಾರ್ಯನಿರ್ವಹಿಸುತ್ತವೆ.  ಆದುದರಿಂದ ಗೂಗಲ್‌ನ ಆ್ಯಪ್‌ಗಳು ಫೋನ್‌ನಲ್ಲಿ ಪ್ರಿಲೋಡೆಡ್ ಆಗಿರುತ್ತವೆ.

ಕೆಲ ತಿಂಗಳ ಹಿಂದೆ ಮೈಕ್ರೋಮ್ಯಾಕ್ಸ್ ಭಾರತ್ -5 ನ್ನು ಬಿಡುಗಡೆ ಮಾಡಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಭಾರತ್-5 ಇನ್ಫಿನಿಟಿ ಮತ್ತು ಭಾರತ್-4 ದೀಪಾವಳಿ ಎಡಿಶನ್ ಫೋನ್‌ಗಳು, 4G VoLTE ತಂತ್ರಜ್ಞಾನವನ್ನು ಒಳಗೊಂಡಿವೆ.  ಈ ಫೋನ್‌ಗಳಲ್ಲಿ ಇರುವ ಇತರ ಫೀಚರ್ಸ್‌ಗಳೇನು? ಇಲ್ಲಿದೆ ಡೀಟೆಲ್ಸ್...

ಮೈಕ್ರೊಮ್ಯಾಕ್ಸ್ ಭಾರತ್-5 ಇನ್ಫಿನಿಟಿ:

ಭಾರತ್ -5 ಇನ್ಫಿನಿಟಿಯು 18:9 ಡಿಸ್ಪ್‌ಲೇ ಹೊಂದಿದ್ದು, 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.  1GB RAM ಮತ್ತು 16GB ಸ್ಟೋರೆಜ್ ಹೊಂದಿರುವ ಈ ಫೋನ್‌ನ ಸಾಮರ್ಥ್ಯವನ್ನು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 32GB ವರೆಗೂ ವಿಸ್ತರಿಸಬಹುದಾಗಿದೆ.  ಫೋನ್‌ನ ಎರಡೂ ಬದಿಗಳಲ್ಲಿ 5 ಮೆಗಾಪಿಕ್ಸೆಲ್  ಕ್ಯಾಮೆರಾ ಇದರ ವಿಶೇಷತೆ.  ಫೇಸ್ ಅನ್‌ಲಾಕ್ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ಹೊಂದಿರುವ ಭಾರತ್-5 ಇನ್ಫಿನಿಟಿಯ ಬೆಲೆ ಕೇವಲ ₹. 5,899 ಮಾತ್ರ.! ಈ ಫೋನ್‌ ಆಫ್‌ಲೈನ್‌ನಲ್ಲೂ ಲಭ್ಯವಿದ್ದೂ, ದೇಶದ ಎಲ್ಲಾ ರೀಟೆಲ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಮೈಕ್ರೋಮ್ಯಾಕ್ಸ್ ಭಾರತ್-4 ದೀಪಾವಳಿ ಎಡಿಶನ್:

ಭಾರತ್-4 ದೀಪಾವಳಿ ಎಡಿಶನ್ 5 ಇಂಚು ಡಿಸ್‌ಪ್ಲೇ ಹೊಂದಿದ್ದು, 2000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 1GB RAM ಮತ್ತು 8GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಈ ಫೋನ್‌ನ ಮೆಮೊರಿಯನ್ನು ಮೈಕ್ರೋಎಸ್‌ಡಿ ಕಾರ್ಡ್ ಬಳಸಿ 32GBವರೆಗೂ ವಿಸ್ತರಿಸಿಕೊಳ್ಳಬಹುದು. ಈ ಫೋನ್‌ ಕೂಡಾ  ಹಿಂಬದಿಯಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದಲ್ಲಿ 2-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎಲ್‌ಇಡಿ ಫ್ಲಾಶ್ ಸೌಲಭ್ಯವನ್ನೂ ಕೂಡಾ ಈ ಮೊಬೈಲ್ ಹೊಂದಿದೆ. ಈ ಮೊಬೈಲ್ ಬೆಲೆ ಕೇವಲ ₹ 4,249 ಮಾತ್ರ! 

ತನ್ನ ಗ್ರಾಹಕರಿಗೆ ಉತ್ತಮ ಮೊಬೈಲ್ ಸೇವೆ ಸಿಗುವಂತಾಗಲು ಮೈಕ್ರೋಮ್ಯಾಕ್ಸ್, ರಿಲಾಯನ್ಸ್ ಜಿಯೋ ಸಹಭಾಗಿತ್ವದೊಂದಿಗೆ ಒಳ್ಳೆಯ ಆಫರ್‌ಗಳನ್ನು ಒದಗಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. 

Follow Us:
Download App:
  • android
  • ios