ಬೆಂಗಳೂರು(ಜು.18): 8 ವರ್ಷಗಳ ಹಿಂದೆ ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಮರ್ಸಡೀಸ್ ಬೆಂಝ್ ಕಾರು ಘಟಕ ಆರಂಭಿಸಿತ್ತು. ಅದೇ ವರ್ಷ 150 ಮರ್ಸಡೀಸ್ ಬೆಂಝ್ ಕಾರು ಔರಂಗಬಾದ್‌ನಲ್ಲಿ ಮಾರಾಟವಾಗೋ ಮೂಲಕ ದಾಖಲೆ ಬರೆದಿತ್ತು. ಈ ಮೂಲಕ ಮರ್ಸಡೀಸ್ ಬೆಂಝ್ ಕಾರು ಭಾರತದ ಪ್ರಮುಖ ನಗರಗಳ ಜೊತೆಗೆ ಪಟ್ಟಣಗಳಲ್ಲಿ ಕಾರು ಘಟಕ ತಯಾರಿಸಲು ನಿರ್ಧರಿಸಿತ್ತು.

ಮರ್ಸಡೀಸ್ ಬೆಂಝ್ ಕಾರು ಇದೀಗ ಕರ್ನಾಟಕ ಸೇರಿದಂತೆ ಭಾರತದ ಚಿಕ್ಕ ಪಣ್ಣಣ ಹಾಗೂ ನಗರಗಳಲ್ಲಿ ಕಾರು ಘಟಕ ಸ್ಥಾಪಿಸಲು ಮುಂದಾಗಿದೆ. ಕರ್ನಾಟಕದ ಉಡುಪಿ, ಬಳ್ಳಾರಿ ಹಾಗೂ ಧಾರವಾಡಗಳಲ್ಲಿ ಮರ್ಸಡೀಸ್ ಬೆಂಝ್ ಕಾರು ಘಟಕ ತಲೆ ಎತ್ತಲಿದೆ.

ನೂತನ ಕಾರು ಘಟಕದಲ್ಲಿ ಮರ್ಸಡೀಸ್ ಬೆಂಝ್ ಶೋ ರೂಂ, ಸರ್ವಿಸ್ ಸೆಂಟರ್, ಸರ್ವೀಸ್ ವೀಲ್ಸ್, ಪಾರ್ಟ್ ಅಸೆಂಬಲ್ ಸೆಕ್ಷನ್, ಗ್ರಾಹಕರ ಲಾಂಜ್, ಸೇರಿದಂತೆ ಹಲವು ಸೌಲಭ್ಯಗಳು ಇರಲಿದೆ. ಹಾಗಂತ ಇದು ಕೇವಲ ಶೂ ರೂಂ ಅಲ್ಲ, ಆಮದು ಮಾಡಿದ ಬಿಡಿಭಾಗಗಳನ್ನ ಜೋಡಣೆ ಮಾಡಿ ನೂತನ ಕಾರನ್ನ ಮಾರುಕಟ್ಟೆಗೆ ಬಿಡುಗಡೆ ಮಾಡೋ ಸೌಲಭ್ಯಕೂಡ ಇದೆ. ಆದರೆ ಇಲ್ಲಿ ಕಾರು ತಯಾರಿಕೆ ಮಾತ್ರ ಇರೋದಿಲ್ಲ. ಈ ಮೂಲಕ ಭಾರತದ ಮೂಲೆ ಮೂಲೆಗ ಮರ್ಸಡೀಸ್ ಬೆಂಝ್ ಕಾರು ತಲುಪಿಸಲು ಸಂಸ್ಥೆ ನಿರ್ಧರಿಸಿದೆ.