ಬೆಂಗಳೂರು(ಅ.07):  ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡೀಸ್ ಬೆಂಝ್ ಈಗ ಮತ್ತೊಂದು ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದೇ ಇ-ಕ್ಲಾಸ್ ಆಲ್ ಟೆರೈನ್. ಇದಕ್ಕೆ ಆನ್ ಶೋ ರೂಂ ಬೆಲೆ ರು. 75 ಲಕ್ಷ ನಿಗದಿಯಾಗಿದ್ದು, ಹಲವಾರು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಇ-ಕ್ಲಾಸ್ ಪೋರ್ಟರ್ ಫೋಲಿಯೊ ಲಾಂಗ್ ವ್ಹೀಲ್‌ಬೇಸ್ (ಸ್ಟ್ಯಾಂಡರ್ಡ್ ಇ-ಕ್ಲಾಸ್ ಸೆಡಾನ್) ಸ್ಟ್ಯಾಂಡರ್ಡ್-ವ್ಹೀಲ್‌ಬೇಸ್ (ಇ 63 ಎಎಂಜಿ ಸೆಡಾನ್) ಮತ್ತು ಎಸ್ಟೇಟ್ (ಆಲ್-ಟೆರೈನ್) ಎಂಬ ಮೂರು ವಿವಿಧ ವಿನ್ಯಾಸಗಳಲ್ಲಿ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ. 

ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ (35ಎಂಎಂ), ಕಾರಿನ ಮುಂಭಾಗದಲ್ಲಿ ಎರಡು ಸಿಲ್ವರ್ ಗ್ರಿಲ್ ಸ್ಲಾಟ್ಸ್, ಬಂಪರ್‌ಗೆ ಸಿಲ್ವರ್ ಪ್ಲೇಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. 116 ಎಂಎಂ ಉದ್ದ, 158ಎಂಎಂನಷ್ಟು ವ್ಹೀಲ್‌ಬೇಸ್‌ನೊಂದಿಗೆ ಒಟ್ಟಾರೆ 1,820 ಲೀಟರ್‌ನಷ್ಟು ಬೂಟ್‌ಸ್ಪೇಸ್ ಅನ್ನು ಈ ಕಾರು ಹೊಂದಿದೆ. 

ಒಳಭಾಗದಲ್ಲಿ ಕಮ್ಯಾಂಡ್ ಇನ್ಫೋಟೈನ್ಮೆಂಟ್ ಸಿಸ್ಟಂ, ಏರ್ ಸಸ್ಪೆಂಷನ್, ಪ್ಯಾನರಮಿಕ್ ಸನ್‌ರೂಫ್, ಏಂಬಿಯಂಟ್ ಲೈಟಿಂಗ್, 3 ಜೋನ್ ಕ್ಲೈಮ್ಯಾಟ್ ಕಂಟ್ರೋಲ್, ವಿದ್ಯುತ್‌ನಿಂದ ಆಪರೇಟ್ ಮಾಡಬಹುದಾದ ಟೈಲ್‌ಗೇಟ್‌ಗಳು ಇಲ್ಲಿನ ವಿಶೇಷ. 2.0 ಲೀಟರ್‌ನ 4 ಸಿಲೆಂಡರ್ ಎಂಜಿನ್‌ನೊಂದಿಗೆ 194 ಬಿಎಚ್‌ಪಿ
ಶಕ್ತಿ, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.  231 ಕಿಮೀ ಗರಿಷ್ಠ ವೇಗ ಹೊಂದಿರುವ ಈ ಕಾರು 8 ಸೆಕೆಂಡ್‌ಗಳಲ್ಲಿಯೇ 0-100 ಕಿಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.