ಬೆಂಗಳೂರು(ಆ.05): ಮಾರುತಿ ಸುಜುಕಿ ಸಂಸ್ಥೆ ಇದೀಗ ಸ್ಪೆಷಲ್ ಎಡಿಶನ್ ವ್ಯಾಗನ್‌ಆರ್ ಕಾರು ಬಿಡುಗಡೆ ಮಾಡಿದೆ. ಅಕ್ಟೋಬರ್‌ನಲ್ಲಿನ ಸಾಲು ಸಾಲು ಹಬ್ಬದ ಪ್ರಯುಕ್ತ ಮಾರುತಿ ಸುಜುಕಿ ಗ್ರಾಹಕರನ್ನ ಸೆಳೆಯಲು ಕಡಿಮೆ ಬೆಲೆ ಹಾಗೂ ಗರಿಷ್ಠ ಫೀಚರ್ಸ್‌ಗಳೊಂದಿಗೆ ವ್ಯಾಗನ್‌ಆರ್ ಸ್ಪೆಷಲ್ ಎಡಿಶನ್ ಕಾರು ಲಾಂಚ್ ಮಾಡಿದೆ.

ನೂತನ ವ್ಯಾಗನ್‌ಆರ್ ಕಾರಿ ಬೆಲೆ 4.17 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ 5.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ವರೆಗಿದೆ. ಇಷ್ಟೇ ಅಲ್ಲ  ಟಾಪ್ ವೆರಿಯೆಂಟ್‌ಗಳಲ್ಲಿ ಅಟೋಮ್ಯಾಟಿಕ್ ಟ್ರಾನ್ಸಿಮಿಶನ್(AMT)ಕೂಡ ಇದೆ.

ವ್ಯಾಗನ್‌ಆರ್ 1.0 ಲೀಟರ್ ಪೆಟ್ರೋಲ್ ಇಂಜಿನ್ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಅಥವಾ AMT ಹೊಂದಿದೆ. ಇಷ್ಟೇ ಅಲ್ಲ ಸಿಎನ್‌ಜಿ ಕಿಟ್ ಕಾರು ಕೂಡ ಲಭ್ಯವಿದೆ.