ಬೆಂಗಳೂರು(ಅ.02): ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥ ಮಾರುತಿ ಸುಜುಕಿ ಇದೀಗ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಮಾರುತಿ ಸುಜುಕಿ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರು ರಸ್ತೆಗಿಳಿಯಲಿದೆ.

ವಿಶೇಷ ಅಂದರೆ ಗುಜರಾತ್‌ನಲ್ಲಿ ಮಾರುತಿ ಸುಜುರಿ ಕಾರು ತಯಾರಿಕಾ ಘಟಕದಲ್ಲಿ ಎಲೆಕ್ಟ್ರಿಕಲ್ ವ್ಯಾಗನ್ ಆರ್ ಕಾರು ತಯಾರಾಗಲಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಜಂಟಿಯಾಗಿ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರು ನಿರ್ಮಿಸಲಿದೆ.

ಕಾರಿನ ಲಿಥೀಯಂ ಬ್ಯಾಟರಿ ನಿರ್ಮಾಣದ ಜವಾಬ್ದಾರಿಯನ್ನ ಟೊಯೊಟಾ ವಹಿಸಿಕೊಂಡಿದೆ. ಇಷ್ಟೇ ಅಲ್ಲ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 1999ರಲ್ಲಿ ಬಿಡುಗಡೆಯಾಗಿದೆ. ಇಲ್ಲೀವರೆಗೆ 20 ಲಕ್ಷ ವ್ಯಾಗನ್ ಆರ್ ಕಾರುಗಳು ಮಾರಾಟವಾಗಿದೆ. ಇದೀಗ ಇದೇ ವ್ಯಾಗನ್ ಆರ್ ಎಲೆಕ್ಟ್ರಿಕಲ್ ಕಾರಾಗಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. 2020ರ ವೇಳಗೆ ನೂತನ ಎಲೆಕ್ಟ್ರಿಕಲ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.