Asianet Suvarna News Asianet Suvarna News

ಮಾರುತಿ ಸುಜುಕಿ ವಿಟಾರ ಬ್ರಿಜಾ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!

ಮಾರುತಿ ಸುಜುಕಿ ವಿಟಾರ ಬ್ರಿಜಾ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ. ಸುರಕ್ಷತೆಯಲ್ಲಿ ಬ್ರಿಜಾ ಕಾರು ಪಡೆದ ಅಂಕ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

Maruti Suzuki Vitara Brezza Gets 4 Star Rating In Global NCAP Crash Test
Author
Bengaluru, First Published Sep 27, 2018, 5:54 PM IST
  • Facebook
  • Twitter
  • Whatsapp

ನವದೆಹಲಿ(ಸೆ.27): ಮಾರುತಿ ಸುಜುಕಿ ವಿಟಾರ ಬ್ರಿಜಾ ಕಾರಿನ ಸುರಕ್ಷತಾ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ವಿಟರಾ ಬ್ರಿಜಾ ಕಾರು 4 ಸ್ಟಾರ್ ಪಡೆದಿದೆ. ಈ ಮೂಲಕ ಬ್ರಿಜಾ ಸೇಫ್ ಕಾರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Maruti Suzuki Vitara Brezza Gets 4 Star Rating In Global NCAP Crash Test

ವಿಟಾರ ಬ್ರೀಜ್ ಡಬಲ್ ಏರ್‌ಬ್ಯಾಗ್, ಎಬಿಎಸ್ ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಒಟ್ಟು 4 ಸ್ಟಾರ್ ಪಡೆದಿದೆ. ವಯಸ್ಕರ ಪ್ರಯಾಣ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 2 ಸ್ಟಾರ್ ಪಡೆದಿದೆ.

ಟಾಟಾ ನೆಕ್ಸಾನ್ ಎಸ್‌ಯುವಿ ಕಾರು ಕೂಡ 4 ಸ್ಟಾರ್ ಪಡೆದಿತ್ತು. ಇದೀಗ ಮಾರುತಿ ಸುಜುಕಿ ವಿಟಾರ ಬ್ರಿಜಾ ಕಾರು ಸುರಕ್ಷತೆಯಲ್ಲೂ ನೆಕ್ಸಾನ್ ಕಾರಿಗೆ ಭಾರಿ ಪೈಪೋಟಿ ನೀಡುತ್ತಿದೆ. 

Maruti Suzuki Vitara Brezza Gets 4 Star Rating In Global NCAP Crash Test

Follow Us:
Download App:
  • android
  • ios