ಬೆಂಗಳೂರು(ಅ.01): ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ನೂತನ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ಸಣ್ಣ SUV ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಮೂಲಕ ಮಹೀಂದ್ರ Kuv100 ಸೇರಿದಂತೆ ಇತರ ಸಣ್ಣ SUV ಕಾರುಗಳಿಗೆ ಪೈಪೋಟಿ ನೀಡೋ ಲೆಕ್ಕಾಚಾರದಲ್ಲಿದೆ.

ಮಾರುತಿ ಸುಜುಕಿ ಸಂಸ್ಥೆಯ ವಿಟಾರ ಬ್ರಿಜಾ ಕಾರು ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  SUV ಕಾರಿನ ಯಶಸ್ಸಿನ ಬೆನ್ನಲ್ಲೇ ಮಾರುತಿ ಮುಂದಿನ ಪೀಳಿಗೆಯ S ಕಾರು ಬಿಡುಗಡೆ ಮಾಡುತ್ತಿದೆ.

2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಮಾರುತಿ ಸುಜುಕಿ ಫ್ಯುಚರ್ S ಎಸ್‌ಯುವಿ ಕಾರನ್ನ ಪ್ರದರ್ಶಿಸಿತ್ತು. ಇದೀಗ 2019ರ ಆರಂಭದಲ್ಲೇ ಈ ಮೈಕ್ರೋ SUV ಕಾರು ಬಿಡುಗಡೆಯಾಗಲಿದೆ.

ಮಾರುತಿ ಮೈಕ್ರೋ SUV ಕಾರು ಇಗ್ನಿಸ್ ಕಾರಿನ ಗಾತ್ರದಲ್ಲಿರಲಿದೆ. ಆದರೆ SUV ಕಾರಿನ ಇಂಜಿನ್ ಹಾಗೂ ಸಾಮರ್ಥ್ಯ ಹೊಂದಿರಲಿದೆ. ಜೊತೆಗೆ ಆಕರ್ಷಕ ವಿನ್ಯಾಸ ಹಾಗೂ ಅಗ್ರೆಸ್ಸೀವ್ ಲುಕ್ ಈ ಮೈಕ್ರೋ ಕಾರಿನ ವಿಶೇಷತೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಮೈಕ್ರೋ SUV ಕಾರಿನ ಬೆಲೆ 5 ಲಕ್ಷದಿಂದ ಪ್ರಾರಂಭವಾಗಲಿದೆ.