ಮಾರುತಿ ಸುಜುಕಿ ಇದೀಗ ಡಿಸೈರ್ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಹಾಗೂ ಹಲವು ಅಡೀಶನಲ್ ಫೀಚರ್ಸ್ ಹೊಂದಿರುವ ಈ ಕಾರು ಇತರ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡೋದರಲ್ಲಿ ಅನುಮಾನವಿಲ್ಲ.
ಬೆಂಗಳೂರು(ಆ.10): ಭಾರತದ ಜನಪ್ರೀಯ ಕಾರು ತಯಾರಿಕಾ ಸಂಸ್ಥೆಯ ಮಾರುತಿ ಸುಜುಕಿ ಡಿಸೈರ್ ಕಾರು ಇದೀಗ ಸ್ಪೆಷಲ್ ಎಡಿಶನ್ ಕಾರನ್ನ ಬಿಡುಗಡೆ ಮಾಡಿದೆ. ಮಿಡ್ ವೇರಿಯೆಂಟ್ ಕಾರಿನ ವಿಶೇಷತೆಗಳನ್ನೊಳಗೊಂಡ ಈ ಕಾರು ಗ್ರಾಹಕರನ್ನ ಮೋಡಿ ಮಾಡಲಿದೆ.

ಕಡಿಮೆ ಬೆಲೆ ಹಾಗೂ ಹಲವು ಫೀಚರ್ಸ್‌ಗಳನ್ನ ಹೊಂದಿರೋ ಡಿಸೈರ್ ಸ್ಪೆಷಲ್ ಎಡಿಶನ್ ಕಾರು ಪೆಟ್ರೋಲ್ ಹಾಗೂ ಡಿಸೆಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಕಾರಿನ ಬೆಲೆ 5.56 ಲಕ್ಷ(ಎಕ್ಸ್ ಶೋ ರೂಂ) ಇನ್ನು ಡಿಸೆಲ್ ಕಾರಿನ ಬೆಲೆ 6.56 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಮಾರುತಿ ಸುಜುಕಿ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆ ಮಾಡೋ ಮೂಲಕ, ಹೊಂಡಾ ಅಮೇಜ್, ಹ್ಯುಂಡೈ ಎಕ್ಸೆಂಟ್, ಟಾಟಾ ಟಿಗೋರ್, ಫೋಕ್ಸ್‌ವ್ಯಾಗನ್ ಅಮೋ ಹಾಗೂ ಫೋರ್ಡ್ ಆಸ್ಪೈರ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.
ಡಿಸೈರ್ ಸ್ಪೆಷಲ್ ಎಡಿಶನ್ ಕಾರಿನ ಇಂಜಿನ ಹಾಗೂ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಬೇಸ್ ವೇರಿಯೆಂಟ್ ಕಾರಿಗಿಂತ 30 ಸಾವಿರ ಹೆಚ್ಚಿನ ಬೆಲೆಯಲ್ಲಿ ಮಿಡ್ ವೇರಿಯೆಂಟ್ ಕಾರು ಗ್ರಾಹಕರ ಕೈಸೇರಲಿದೆ.
ಮಾರುತಿ ಸುಜುಕಿ ಡಿಸೈರ್ ಸ್ಪೆಷಲ್ ಎಡಿಶನ್ ಕಾರಿನಲ್ಲಿ ಫ್ರಂಟ್ ಪವರ್ ವಿಂಡೋ, ವೀಲ್ ಕವರ್, ರೇರ್ ಪಾರ್ಕಿಂಗ್ ಸೆನ್ಸಾರ್, ಬ್ಲೂಟೂಟ್ ಮ್ಯೂಸಿಕ್ ಸಿಸ್ಟಮ್ ಹಾಗೂ ರಿಮೂಟ್ ಸೆಂಟ್ರಲ್ ಲಾಕಿಂಗ್ ಸೌಲಭ್ಯ ಹೊಂದಿದೆ.
ಎಬಿಎಸ್ , ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್ (ಇಬಿಡಿ) ಹಾಗೂ ಬ್ರೆಕ್ ಆಸಿಸ್ಟ್(ಬಿಎ) ಹಾಗೂ ಡ್ಯುಯೆಲ್ ಏರ್ ಬ್ಯಾಗ್ಸ್ ಹೊಂದಿದೆ. ಈ ಮೂಲಕ ಮಾರುತಿ ಸುಜುಕಿ ಸಂಸ್ಥೆ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದೆ.
