ಬೆಂಗಳೂರು(ಜು.14): ಭಾರತದ ಅತ್ಯಂತ ಜನಪ್ರೀಯ ಕಾರುನಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಅಗ್ರಸ್ಥಾನದಲ್ಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುತಿ ಸುಜುಕಿ ಸಂಸ್ಥೆ ಕಾರುಗಳನ್ನ ಬಿಡುಗಡೆ ಮಾಡಿ, ಮಾರಾಟದಲ್ಲೂ ಸೈ ಎನಿಸಿಕೊಂಡಿದೆ.

ಮಾರುತಿ ಸುಜುಕಿ ಸಿಯಾಝ್ ಬಳಿಕ ಇದೀಗ ನೂತನ ಸಿಯಾಝ್ ಫೇಸ್‌ಲಿಫ್ಟ್ ಕಾರಿಗೆ ಇದೀಗ ಭಾರಿ ಬೇಡಿಕೆ ಎದುರಾಗಿದೆ.  ಈಗಾಗಲೇ ಶೋ ರೂಂಗಳಿಗೆ ತಲುಪಿರುವ ಸಿಯಾಜ್ ಫೇಸ್‌ಲಿಫ್ಟ್, ಲಕ್ಸುರಿ ಹಾಗೂ ಇತರ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಸೇರುತ್ತಿದೆ.

ನೂತನ ಸಿಯಾಝ್ ಫೇಸ್‌ಲಿಫ್ಟ್ ಬೆಲೆ ಬೆಲೆ 8.19 ಲಕ್ಷದಿಂದ(ಎಕ್ಸ್ ಶೋರೂಂ)10.97 ಲಕ್ಷ ರೂಪಾಯಿ . ಪೆಟ್ರೋಲ್ ಇಂಜಿನ್ 21 ಕೀಮಿ, ಡೀಸೆಲ್ 28 ಕೀಮಿ ಮೈಲೇಜ್ ನೀಡಲಿದೆ. ಈ ಮೂಲಕ ಸೆಡಾನ್ ಹಾಗು ಲಕ್ಸುರಿ ಕಾರುಗಳಲ್ಲಿ ಇದೀಗ ಸಿಯಾಜ್ ಫೇಸ್‌ಲಿಫ್ಟ್ ಕಾರಿಗೆ ಪೈಪೋಟಿ ನೀಡಲು ಅಸಾಧ್ಯ ಅನ್ನೋ ಮಾತು ಎದುರಾಗಿದೆ.

ಎಲ್ಇಡಿ ಹೆಡ್ ಲ್ಯಾಂಪ್ಸ್, ಆಕರ್ಷಕ ಫಾಗ್ ಲ್ಯಾಂಪ್ಸ್ ಸೇರಿದಂತೆ ಹಲವು ವೈಶಿಷ್ಟ್ಯದೊಂದಿಗೆ ಸಿಯಾಝ್ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿದೆ. ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು, ಹಾಗೂ ನೂತನ ವಿನ್ಯಾಸ ಕೂಡ ಹೊಂದಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಇಂಜಿನ್ ಕೂಡ ಲಭ್ಯವಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ನೂತನ ಸಿಯಾಝ್ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಅನ್ನೋ ವಿಶ್ವಾಸ ಮಾರುತಿ ಸುಜುಕಿ ಸಂಸ್ಥೆಯದ್ದಾಗಿದೆ.