ಮಾರುತಿ ಕಾರುಗಳಿಗೆ ಭರ್ಜರಿ ಆಫರ್-ಕಾರು ಕೊಳ್ಳಲು ಸಕಾಲ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 1:33 PM IST
Maruti Suzuki announces discount Offer for customers
Highlights

ಮಾರುತಿ ಸುಜುಕಿ ಕಾರು ಖರೀದಿಸುವ ಗ್ರಾಹಕರಿಗೆ ಇದೀಗ ಸಂಸ್ಥೆ ಭರ್ಜರಿ ಆಫರ್ ನೀಡಿದೆ. ಕ್ಯಾಶ್ ಡಿಸ್ಕಂಟ್ ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಗ್ರಹಕರನ್ನ ಸೆಳೆಯಲು ಕಂಪೆನಿ ರಿಯಾಯಿತಿ ನೀಡಿದೆ.
 

ಬೆಂಗಳೂರು(ಸೆ.07): ಭಾರತದ ಅತೀ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ ಇದೀಗ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಬರೋಬ್ಬರಿ 70,000 ರೂಪಾಯಿಗಳ ವರೆಗೆ ಕಾರಿನ ಮೇಲೆ ರಿಯಾತಿ ನೀಡಿದೆ. 

ಮಾರುತಿ ಸುಜುಕಿ ಸ್ವಿಫ್ಟ್, ಎರ್ಟಿಗಾ, ಡಜೈರ್, ಸೆಲೆರಿಯೋ, ಆಲ್ಟೋ ಕಾರುಗಳಿಗೆ ಮಾರುತಿ ಸುಜುಕಿ ರಿಯಾಯಿತಿ ಘೋಷಿಸಿದೆ.  ನೂತನ ಕಾರುಗಳಿಗೆ ರಿಯಾಯಿತಿ ಹಾಗೂ ಹಳೇ ಕಾರಿನ ಎಕ್ಸಚೇಂಜ್‌ಗೂ ಆಫರ್ ನೀಡಿದೆ.

ನೂತನ ಮಾರುತಿ ಸುಜುಕಿ ಸ್ಪಿಫ್ಟ್ ಕಾರು ಖರೀದಿಸುವವರಿಗೆ 20,000 ಕ್ಯಾಶ್ ಡಿಸ್ಕಂಟ್ , ಸ್ಪೆಷಲ್ ಎಡಿಶನ್ ಕಾರಿಗೆ 27,000 ರೂಪಾಯಿ ಡಿಸ್ಕಂಟ್ ನೀಡಿದೆ. ಇನ್ನು ಎಕ್ಸ್‌ಚೇಂಜ್ ಕಾರಿಗೆ 10,000 ರೂಪಾಯಿ ಆಫರ್ ನೀಡಿದೆ.

ಎರ್ಟಿಗಾ ಪೆಟ್ರೋಲ್ ಕಾರಿಗೆ 15,000 ರೂಪಾಯಿ,  ಡಿಸೇಲ್ 20,000 ರೂಪಾಯಿ ಹಾಗೂ ಸಿಎನ್‌ಜಿ ಟ್ರಿಮ್ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕಂಟ್ ನೀಡಲಾಗಿದೆ. ಎರ್ಟಿಗಾ ಎಕ್ಸ್‌ಚೇಂಜ್ ಆಫರ್ 30,000 ರೂಪಾಯಿ ನೀಡಲಾಗಿದೆ.

ಮಾರುತಿ ಸುಜುಕಿ ಡಿಜೈರ್ ಪೆಟ್ರೋಲ್ ಕಾರಿಗೆ 20,000 ರೂಪಾಯಿ, ಸ್ಪೆಷಲ್ ಎಡಿಶನ್ ಕಾರಿಗೆ 27,000 ರೂಪಾಯಿ ಡಿಸ್ಕಂಟ್ ನೀಡಲಾಗಿದೆ. ಇನ್ನು ಕಾರಿಗೆ ಅನುಗುಣವಾಗಿ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ.

ಸೆಲೆರಿಯೋ ,ಅಲ್ಟೋ, ಹಾಗೂ ಅಲ್ಟೋ ಕೆ10 ಕಾರುಗಳಿಗೂ ಆಫರ್ ನೀಡಲಾಗಿದೆ. ಈ ಮೂಲಕ ಮಾರುತಿ ಸುಜುಕಿ ಕಾರು ಕೊಳ್ಳುವವರಿಗೆ ಕಂಪೆನಿ ಹಲವು ಆಫರ್ ನೀಡಿದೆ. ಇಷ್ಟೇ ಅಲ್ಲ ಮಾರಾಟದಲ್ಲೂ ಗಣನೀಯ ಏರಿಕೆ ಕಾಣೋ ವಿಶ್ವಾಸದಲ್ಲಿದೆ.

loader