ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಟೂರ್ ಕಾರ್!

Maruti Suzuki Alto Tour to be introduced soon
Highlights

ಮಾರುತಿ ಸುಜುಕಿ ಅಲ್ಟೋ ಇದೀಗ ನೂತನ ಟೂರ್ ವೆರಿಯೆಂಟ್ ಕಾರು ಪರಿಚಯಿಸಲು ತಯಾರಿ ನಡೆಸಿದೆ. ಸ್ವಿಫ್ಟ್ ಡಿಸೈರ್ ಟೂರ್ ಕಾರಿನ ಯಶಸ್ಸಿನ ಬಳಿಕ ಇದೀಗ ಅಲ್ಟೋ ಕಾರಿನಲ್ಲೂ ಟೂರ್ ಕಾರು ಪರಿಚಯಿಸಲು ಮುಂದಾಗಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜು.16): ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ತನ್ನ ಜನಪ್ರೀಯ ನೂತನ ಅಲ್ಟೋ ಟೂರ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಮತ್ತೆ ಮಾರುತಿ ಅಲ್ಟೋ ಮೋಡಿ ಮಾಡಲಿದೆ.

ಸ್ಪಿಫ್ಟ್ ಡಿಸೈರ್ ಕಾರು ಟೂರ್ ವೆರಿಯೆಂಟ್ ಬಳಿಕ ಇದೀಗ ಅಲ್ಟೋ ಟೂರ್ ಕಾರು ಬಿಡುಗಡೆ ಮಾಡಲು ಮಾರುತಿ ಸುಜುಕಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಅಲ್ಟೋ 800 ಹಾಗೂ ಕೆ10 ವೆರಿಯೆಂಟ್‌ಗಳಲ್ಲಿ ಟೂರ್ ಪರಚಯಿಸಲು ಸಿದ್ದತೆ ನಡೆದಿದೆ.

ನೂತನ ಅಲ್ಟೋ ಟೂರ್ ಕಾರು ಪೆಟ್ರೋಲ್ ಹಾಗೂ ಗ್ಯಾಸ್ ಇಂಜಿನ್‌ಗಳಲ್ಲಿ ಲಭ್ಯವಿದೆ. 796 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿದೆ. 47 ಬಿಹೆಚ್‌ಪಿ ಪವರ್ ಹಾಗೂ 69 ಎನ್ಎಮ್ ಟಾರ್ಕ್ಯೂ ಹೊಂದಿದೆ.

ಗ್ಯಾಸ್ ವೇರಿಯೆಂಟ್ ಇಂಜಿನ್ ಕಾರು 40 ಬಿಹೆಚ್‌ಪಿ ಪವರ್ ಹಾಗೂ 60 ಎನ್ಎಮ್ ಟಾರ್ಕ್ಯೂ ಹೊಂದಿದೆ. ಕೆ10 ವೆರಿಯೆಂಟ್‌ಗಳಲ್ಲಿ ಬರೋ ಟೂರ್ ಕಾರು 1.0 ಲೀಟರ್ ಇಂಜಿನ್ ಹೊಂದಿದೆ. ನೂತನ ಅಲ್ಟೋ ಟೂರ್ ಕಾರಿನ ಬೆಲೆ 4.21 ಲಕ್ಷದಿಂದ ಪ್ರಾರಂಭವಾಗಲಿದೆ.
 

loader