ಮಾರುತಿ, ಹೋಂಡಾ ಕಾರುಗಳ ದರ ಭಾರಿ ಏರಿಕೆ

First Published 11, Jan 2018, 9:23 AM IST
Maruthi Honda Car Price Hike
Highlights

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹೋಂಡಾ ಇಂಡಿಯಾ ತಮ್ಮ ಕಾರುಗಳ ದರವನ್ನು 32,000 ರು. ವರೆಗೂ ಏರಿಕೆ ಮಾಡಿವೆ.

ನವದೆಹಲಿ(ಜ.11): ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹೋಂಡಾ ಇಂಡಿಯಾ ತಮ್ಮ ಕಾರುಗಳ ದರವನ್ನು 32,000 ರು. ವರೆಗೂ ಏರಿಕೆ ಮಾಡಿವೆ.

ಜ.8ರಿಂದ ಈ ಎರಡು ಕಂಪನಿಗಳ ಎಲ್ಲಾ ಮಾದರಿಯ ಕಾರುಗಳ ದರ ಏರಿಕೆಯಾಗಿದ್ದು, ಮಾರುತಿ ಕಾರುಗಳ ದರ 1,700 ರು.ನಿಂದ 17,000 ರು. ವರೆಗೆ ಹಾಗೂ ಹೋಂಡಾ ಕಾರುಗಳ ದರ 6000 ದಿಂದ 32,000 ರು.ವರೆಗೂ ಏರಿಕೆಯಾಗಲಿದೆ.

ಐಷಾರಾಮಿ ಕಾರುಗಳ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಟಾಟಾ ಮೋಟಾರ್ಸ್‌ ಜ.1ರಿಂದ ತನ್ನ ಕಾರುಗಳ ದರವನ್ನು 25,000 ರು. ವರೆಗೂ ಏರಿಕೆ ಮಾಡಿತ್ತು.

loader