ಮುಂದಿನ ತಿಂಗಳು ಬರುತ್ತಿವೆ ಮಾರುತಿ ಎಲೆಕ್ಟ್ರಿಕ್ ಕಾರು

First Published 25, Jan 2018, 8:12 AM IST
Maruthi Electric Cars
Highlights

ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಮುಂದಿನ ತಿಂಗಳು ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೆ ಇಡಲಿದೆ.

ನವದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಮುಂದಿನ ತಿಂಗಳು ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೆ ಇಡಲಿದೆ.

2 ಸೀಟಿನ ಇ-ಸರ್ವೈವರ್ ಎಸ್‌ಯುವಿ ಕಾರಿನ ಮಾದರಿಯನ್ನು ಕಂಪನಿ ಸಿದ್ಧಪಡಿಸಿದೆ. ಈ ಕಾರು ಭವಿಷ್ಯದ ಪರಿಕಲ್ಪನೆ ಹೊಂದಿದ್ದು, ಹೊಸ ತಂತ್ರ ಜ್ಞಾನವನ್ನು ಒಳಗೊಂಡಿದೆ. ಸ್ಥಳೀಯ ಘಟಕಗಳು, ಬ್ಯಾಟರಿಗಳು ಮತ್ತು ಮರು ಬಳಕೆ ಬ್ಯಾಟರಿಗಳು ಸೇರಿದಂತೆ ಸಂಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಕಂಪನಿ ಬದ್ಧವಾಗಿದೆ ಎಂದು ಮಾರುತಿ ತಿಳಿಸಿದೆ.

loader