ಫೇಸ್‌ಬುಕ್‌ ಮಾಹಿತಿ ಸೋರಿಕೆ ತಡೆಗೆ ರಹಸ್ಯ ಪೊಲೀಸರ ನಿಯೋಜನೆ!

Mark Zuckerberg reportedly Deploys Secret police
Highlights

ಫೇಸ್‌ಬುಕ್‌ ಕಂಪನಿಯ ರಹಸ್ಯ ಮಾಹಿತಿ ಸೋರಿಕೆ ಮಾಡುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಹಸ್ಯ ಸಿಬ್ಬಂದಿಗಳ ತಂಡವೊಂದನ್ನು ಕಂಪನಿಯ ಮುಖ್ಯಸ್ಥ ಮಾರ್ಕ್ಸ್‌ ಜುಕರ್‌ಬರ್ಗ್‌ ರಚಿಸಿದ್ದಾರೆ.

ಲಂಡನ್‌: ಫೇಸ್‌ಬುಕ್‌ ಕಂಪನಿಯ ರಹಸ್ಯ ಮಾಹಿತಿ ಸೋರಿಕೆ ಮಾಡುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಹಸ್ಯ ಸಿಬ್ಬಂದಿಗಳ ತಂಡವೊಂದನ್ನು ಕಂಪನಿಯ ಮುಖ್ಯಸ್ಥ ಮಾರ್ಕ್ಸ್‌ ಜುಕರ್‌ಬರ್ಗ್‌ ರಚಿಸಿದ್ದಾರೆ.

ಇತ್ತೀಚೆಗೆ ಕಂಪನಿಯ ಸಿಬ್ಬಂದಿಯೊಬ್ಬರನ್ನು ಯಾವುದೋ ವಿಚಾರದ ಪ್ರಮೋಷನ್‌ಗೆ ಎಂಬ ರೀತಿಯಲ್ಲಿ ಸಭೆಗೆ ಆಹ್ವಾನಿಸಲಾಗಿತ್ತು. ಹೀಗೆ ಸಭೆಗೆ ಹಾಜರಾದ ಸಿಬ್ಬಂದಿಯನ್ನು ಕಂಪನಿಯ ತನಿಖೆಯ ಮುಖ್ಯಸ್ಥರಾದ ಸೋನ್ಯಾ ಅಹುಜಾ ನೇತೃತ್ವದ ತಂಡ ವಿಚಾರಣೆ ನಡೆಸಿತು.

ಕಂಪನಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದರ ಬಗ್ಗೆ ಸಭೆಯಲ್ಲಿ ವಿಚಾರಿಸಲಾಯಿತು. ಅಲ್ಲಿ ಸಿಬ್ಬಂದಿ ಸುಳ್ಳು ಹೇಳಿ ತಪ್ಪಿಸಕೊಳ್ಳದ ರೀತಿಯಲ್ಲಿ, ಆತನ ಕಂಪ್ಯೂಟರ್‌ನಲ್ಲಿ ಇದ್ದ ಸ್ಕ್ರೀನ್‌ಶಾಟ್‌ಗಳು, ಕಂಪನಿಗೆ ಸೇರಿಕೊಳ್ಳುವ ಮುನ್ನ ಪತ್ರಕರ್ತರೊಬ್ಬರ ಜತೆಗೆ ಮಾಡಲಾದ ಸಂದೇಶಗಳನ್ನು ಅಹುಜಾ ನೇತೃತ್ವದ ತನಿಖಾ ತಂಡ ಹಾಜರುಪಡಿಸಿತು ಎಂದು ಮೂಲಗಳು ತಿಳಿಸಿವೆ.

ಪ್ರತಿ ವಾರವೂ ನೌಕರರ ಜತೆ ಸಭೆ ನಡೆಸುವ ಜುಕರ್‌ ಬರ್ಗ್‌, ಸಾವಿರಾರು ನೌಕರರಿಗೆ ನೂತನ ಪ್ರಾಡಕ್ಟ್ಗಳು ಮತ್ತು ತಮ್ಮ ತಂತ್ರಗಾರಿಕೆ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ ಇವುಗಳನ್ನು ಅವರು ಬಯಲು ಮಾಡುವಂತಿಲ್ಲ. ಇದರ ಹೊರತಾಗಿಯೂ ಅಂಥ ಮಾಹಿತಿ ಹೊರಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಇದೀಗ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

loader