ಸೋಹನ್, ವಂದನಾ, ಪ್ರಣತಿ, ಹರ್ಷಿತ್ ಮತ್ತು ಚಂದನ್ ಅಮೇರಿಕದ ನಾಸಾಗೆ ತೆರಳಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು.

ಮಂಡ್ಯ(ಅ.12): ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಅಭಿನವ ಭಾರತಿ ವಿದ್ಯಾ ಕೇಂದ್ರದ 5 ವಿದ್ಯಾರ್ಥಿಗಳು ಅ.24 ರಂದು ಅಮೆರಿಕಾದ ನಾಸಾಗೆ ೧೦ ದಿನಗಳ ಶೈಕ್ಷಣಿಕ ಪ್ರವಾಸ ತೆರಳುತ್ತಿದ್ದಾರೆ.

ನಮ್ಮ ಸಂಸ್ಥೆಯಿಂದ ಆಯ್ದ 5 ವಿದ್ಯಾರ್ಥಿಗಳನ್ನು ಅಮೆರಿಕಾದ ನಾಸಾಗೆ ಕಳಿಸಿ ಅಲ್ಲಿನ‌ ವಿಜ್ಣಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆಂದು ಮಾಹಿತಿ ಸಂಸ್ಥೆಯ ಸಂಸ್ಥಾಪಕರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೂಡ ತಾವು ನಾಸಾಗೆ ಹೋಗಿ ಅಲ್ಲಿನ ‌ವಿಜ್ಞಾನಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸೋಹನ್, ವಂದನಾ, ಪ್ರಣತಿ, ಹರ್ಷಿತ್ ಮತ್ತು ಚಂದನ್ ಅಮೇರಿಕದ ನಾಸಾಗೆ ತೆರಳಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು.