ಮಹೀಂದ್ರಾ ಎಲೆಕ್ಟ್ರಿಕಲ್ ಆಟೋ ರಿಕ್ಷಾ-ಬಜಾಜ್,ಟಿವಿಎಸ್‌ಗೆ ಪೈಪೋಟಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 5:10 PM IST
Mahindra introduced Electrical Auto riksha at Global Mobility Summit 2018
Highlights

ಆಟೋ ಮೋಟಾರು ಕ್ಷೇತ್ರದಲ್ಲಿ ಬಜಾಜ್ ಹಾಗೂ ಟಿವಿಎಸ್ ಪ್ರಾಬಲ್ಯ ಸಾಧಿಸಿದೆ. ಇದೀಗ ಈ ಎರಡೂ ಕಂಪೆನಿಗಳಿಗೆ ಪೈಪೋಟಿ ನೀಡಲು ಮಹೀಂದ್ರ ನಿರ್ಧರಿಸಿದೆ. ಶೀಘ್ರದಲ್ಲೇ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ಬಿಡುಗಡೆ ಮಾಡಲು ಸಜ್ಜಾಗಿದೆ.
 

ನವದೆಹಲಿ(ಸೆ.09): ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಭಾರತೀಯ ಜನಸಾಮಾನ್ಯರ ಬದುಕು ಹೈರಾಣಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ದಿನಬಳಕೆ ವಸ್ತುಗಳ ಬೆಲೆ, ಸಾರಿಗೆ ದರಗಳು ಹೆಚ್ಚಳವಾಗಿದೆ. ಹೀಗಾಗಿ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಿದೆ.

ಮಾಲಿನ್ಯ ರಹಿತ, ಹಾಗೂ ಇಂಧನ ಸಮಸ್ಯೆಗೆ ಮುಕ್ತಿ ಹಾಡಲು ಹಲವು ಮೋಟಾರು ಕಂಪೆನಿಗಳು ಎಲೆಕ್ಟ್ರಿಕಲ್ ವಾಹನ್ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಮಹೀಂದ್ರ ಮೋಟಾರು ಸಂಸ್ಥೆ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಬಿಡುಗಡೆಗೆ ಸಜ್ಜಾಗಿದೆ.

2018ರ ಗ್ಲೋಬಲ್ ಮೊಬಿಲಿಟಿ ಸಮ್ಮಿಟ್ ಎಕ್ಸ್‌ಪೋದಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಪರಿಚಯಿಸಿದೆ. ಮಹೀಂದ್ರ ಟ್ರಿಯೋ ಹಾಗೂ ಮಹೀಂದ್ರ ಟ್ರಿಯೋ ಯಾರಿ ಅನ್ನೋ 2 ವೇರಿಯೆಂಟ್‌ಗಳನ್ನ ಮಹೀಂದ್ರ ಪರಿಚಯಿಸಿದೆ.

 

 

ಮುಂದಿನ 5 ವರ್ಷಗಳಲ್ಲಿ ಭಾರತವನ್ನ ಸಂಪೂರ್ಣವಾಗಿ ಎಲೆಕ್ಟ್ರಿಕಲ್ ವಾಹನಗಳು ಆವರಿಸಿಕೊಳ್ಳಲಿದೆ. ಹೀಗಾಗಿ ಕೇವಲ ಕಾರು, ಬೈಕ್ ಮಾತ್ರವಲ್ಲ, ಮೂರು ಚಕ್ರದ ಆಟೋ ರಿಕ್ಷಾ ಕೂಡ ಎಲೆಕ್ಟ್ರಿಕಲ್ ವಾಹನವಾಗಿ ಬದಲಾಗಲಿದೆ ಎಂದು ಮಹೀಂದ್ರ ಸಂಸ್ಥೆ ತಿಳಿಸಿದೆ.

 

 

2019 ಅಥವಾ 2020ರಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆದರೆ ಇದರ ಬೆಲೆ ಕುರಿತು ಮಹೀಂದ್ರ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

loader