ನೀವು ಬ್ಯಾಟರಿ ಜಾರ್ಜ್ ಮುಗಿದು ಚಿಂತಾಜನಕ ಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದರೆ ಸ್ನೇಹಿತರಿಗೆ ಈ ವಿಚಾರ ತಿಳಿಸುವ ಮೂಲಕ ಈ ಫೀಚರ್ ನಿಮಗೆ ನೆರವಾಗಲಿದೆ.
ನೀವು ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಸುತ್ತಿದ್ದೀರ? ಈ ನಡುವೆ ಬ್ಯಾಟರಿ ಚಾರ್ಜ್ ಕಡಿಮೆಯಾಗಿ ಕೊನೆಯುಸಿರೆಳೆಯುವ ಸ್ಥಿತಿಯಲ್ಲಿದೆಯೇ? ಹಾಗಿದ್ದರೆ ನಿಮ್ಮ ಬ್ಯಾಟರಿ ಲೆವೆಲ್ಲನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ನಿರಾಳರಾಗುವ ಅವಕಾಶವನ್ನು ಗೂಗಲ್ ಮ್ಯಾಪ್ ಆಪ್ ಮುಂದಿನ ಅಪ್‌ಡೇಟ್‌ನಲ್ಲಿ ನೀಡಲು ಉದ್ದೇಶಿಸಿದೆ. ತನ್ನ ಇತ್ತೀಚಿನ ಬೀಟಾ ವರ್ಸನ್‌ನಲ್ಲಿ ಗೂಗಲ್ ಇದಕ್ಕೋಸ್ಕರ ಪ್ರತ್ಯೇಕ ಕೋಡ್ ಸೇರಿಸಿದೆ ಎಂದು ಹೇಳಲಾಗಿದೆ.
ಈ ಮೂಲಕ ‘ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್’ ಅನ್ನು ಗೂಗಲ್ ಮ್ಯಾಪ್ ಲೊಕೇಶನ್ ಜೊತೆ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಾಧ್ಯ. ನೀವು ಬ್ಯಾಟರಿ ಜಾರ್ಜ್ ಮುಗಿದು ಚಿಂತಾಜನಕ ಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದರೆ ಸ್ನೇಹಿತರಿಗೆ ಈ ವಿಚಾರ ತಿಳಿಸುವ ಮೂಲಕ ಈ ಫೀಚರ್ ನಿಮಗೆ ನೆರವಾಗಲಿದೆ. ಒಂದು ವೇಳೆ ಸೆಟ್ ಪರ್ಮಿಶನ್ ಸಮಸ್ಯೆ ಅಥವಾ ಇನ್ಯಾವುದೋ ಕಾರಣಕ್ಕೆ ಬ್ಯಾಟರಿ ಲೆವೆಲ್ ತಿಳಿಸಲಾಗದಿದ್ದರೆ ‘ಬ್ಯಾಟರಿ ಲೆವೆಲ್ ಅನ್‌ನೋನ್’ ಎಂಬ ಸಂದೇಶ ಬರಲಿದೆ ಎಂದು ಹೇಳಲಾಗಿದೆ.
