Asianet Suvarna News Asianet Suvarna News

ಟಾಟಾ ಮೋಟಾರ್ಸ್ R&Dಗೆ ಖರ್ಚು ಮಾಡೋ ಹಣವೆಷ್ಟು?

ವಿಶ್ವದಲ್ಲಿರೋ ಪ್ರತಿಷ್ಠಿತ ಕಂಪೆನಿಗಳು ಸಂಶೋಧನೆ ಹಾಗೂ ಅಭಿವೃದ್ಧಿ( R&D)ಗಾಗಿ ವಿಶೇಷ ತಂಡವನ್ನ ನೇಮಕ ಮಾಡಿಕೊಂಡಿರುತ್ತೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಮೀಸಲಿಡುತ್ತೆ. ಇದೀಗ  R&D ಗಾಗಿ ಗರಿಷ್ಠ ಖರ್ಚು ಮಾಡೋ ಸಂಸ್ಥೆಗಳ ಪಟ್ಟಿ ಬಿಡುಗಡೆಯಾಗಿದೆ. ಇಲ್ಲಿದೆ ಲಿಸ್ಟ್.

List of companies which spend the most on research and development in the world
Author
Bengaluru, First Published Sep 26, 2018, 7:56 PM IST

ನವದೆಹಲಿ(ಸೆ.26): ಸಂಶೋಧನೆ ಹಾಗೂ ಅಭಿವೃದ್ದಿಗಾಗಿ( R&D) ಪ್ರತಿ ಕಂಪೆನಿಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತೆ. ಇದೀಗ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಗರಿಷ್ಠ ಖರ್ಚು ಮಾಡೋ ವಿಶ್ವದ 100 ಕಂಪೆನಿಗಳ ಹೆಸರು ಪ್ರಕಟಗೊಂಡಿದೆ. ಇದರಲ್ಲಿ ಭಾರತದ ಟಾಟಾ ಮೋಟಾರ್ಸ್ 13ನೇ ಸ್ಥಾನ ಪಡೆದಿದೆ.

R&Dಗೆ ಗರಿಷ್ಠ ಖರ್ಚು ಮಾಡೋ 100 ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತದ ಕಂಪೆನಿ ಟಾಟಾ ಮೋಟಾರ್ಸ್. ಟಾಟಾ ಮೋಟಾರ್ಸ್ 2017-18ರ ಸಾಲಿನಲ್ಲಿ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಬರೋಬ್ಬರಿ 2397.5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

ಟಾಟಾ ಮೋಟಾರ್ಸ್ ಜೊತೆಗಿನ ಒಪ್ಪಂದದ ಸಂಸ್ಥೆಗಳಾದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್‌ಗಳ ಒಟ್ಟು ಖರ್ಚು 19,444 ಕೋಟಿ ರೂಪಾಯಿ. ಇದು 2017-18ರ ಸಾಲಿನಲ್ಲಿ ಟಾಟಾ ಮೋಟಾರ್ಸ್ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ ಮಾಡಿದ ಒಟ್ಟು ಖರ್ಚುು. ಈ ಲಿಸ್ಟ್‌ನಲ್ಲಿ ಸ್ಥಾನ ಪಡೆದ ಭಾರತದ ಇತರ 9 ಕಂಪೆನಿಗಳು ಖರ್ಚು ಮಾಡೋ ಒಟ್ಟು ಮೊತ್ತಕ್ಕಿಂತ ಟಾಟಾ ಸಂಸ್ಥೆ ಖರ್ಚು ಮಾಡೋ ಮೊತ್ತ ಹೆಚ್ಚಿದೆ. 

ಭಾರತ ಮಹೀಂದ್ರ & ಮಹೀಂದ್ರ ಕಂಪೆನಿ 2017-18ರ ಸಾಲಿನಲ್ಲಿ ರಿಚರ್ಸ್ ಹಾಗೂ ಡೆವೆಲಪ್‌ಮೆಂಟ್‌ಗಾಗಿ 1999.1 ಕೋಟಿ ಖರ್ಚು ಮಾಡುತ್ತಿದೆ. ಈ ಮೂಲಕ ಮಹೀಂದ್ರ 114ನೇ ಸ್ಥಾನ ಪಡೆದಿದೆ. ಇನ್ನು ಮಾರುತಿ ಸುಜುಕಿ ಸಂಸ್ಥೆ 227ನೇ ಸ್ಥಾನ ಪಡೆದಿದೆ. ಮಾರುತಿ ಸುಜುಕಿ 831.6 ಕೋಟಿ ರೂಪಾಯಿ ಖರ್ಚು ಮಾಡಿದೆ.

Follow Us:
Download App:
  • android
  • ios