ಬಹು ನಿರೀಕ್ಷಿತ ಲಿನೊವೋ Z5 ಶೀಘ್ರದಲ್ಲೇ ಬಿಡುಗಡೆ

First Published 28, May 2018, 3:41 PM IST
Lenovo Z5 will officially launch on June 5
Highlights

ಜಾಗತಿಕ ಮೊಬೈಲ್ ತಯಾರಿಕಾ ಕಂಪನಿಯಾದ ಲಿನೊವೋ ಶೀಘ್ರದಲ್ಲೇ ತನ್ನ Z5 ಮೊಬೈಲ್ ನ್ನು ಬಿಡುಗಡೆ ಮಾಡಲಿದೆ. ಇದೇ ಜೂನ್ 5 ರಂದು ಬಿಜಿಂಗ್ ನಲ್ಲಿ ಲಿನೊವೋ Z5 ಮೊಬೈಲ್ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಬಿಜಿಂಗ್(ಮೇ 28 ): ಜಾಗತಿಕ ಮೊಬೈಲ್ ತಯಾರಿಕಾ ಕಂಪನಿಯಾದ ಲಿನೊವೋ ಶೀಘ್ರದಲ್ಲೇ ತನ್ನ Z5 ಮೊಬೈಲ್ ನ್ನು ಬಿಡುಗಡೆ ಮಾಡಲಿದೆ. ಇದೇ ಜೂನ್ 5 ರಂದು ಬಿಜಿಂಗ್ ನಲ್ಲಿ ಲಿನೊವೋ Z5 ಮೊಬೈಲ್ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

4 ಟಿಬಿ ಇಂಟರ್ನಲ್ ಮೆಮೊರಿ, ಕ್ವಾಲಕಾಮ್ ಸ್ನ್ಯಾಪ್ ಡ್ರ್ಯಾಗನ್ ೮೪೫ ಪ್ರೊಸೆಸರ್ ಹೊಂದಿರುವ Z5 ಮೊಬೈಲ್ ೬ ಮತ್ತು 8 ಜಿಬಿ ರ್ಯಾಮ್ ಹೊಂದಿರಲಿದೆ. ಅಲ್ಲದೇ ಬ್ಯಾಟರಿ ಲೈಫ್ 45 ದಿನಗಳವರೆಗೆ ಇರಲಿದೆ ಎಂದೂ ಬಿಜಿಂಗ್ ನ ಪತ್ರಿಕೆಯೊಂದು ವರದಿ ಮಾಡಿದೆ. ಲಿನೊವೋ Z5 ಮೊದಲ ಸಂಪೂರ್ಣ ಫುಲ್ ಸ್ಕ್ರೀನ್ ಡಿಸ್ಪ್ಲೆ ಹೊಂದಿರಲಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಲಿನೊವೋ ವೈಸ್ ಪ್ರೆಸಿಡೆಂಟ್, ಚಾಂಗ್ ಚೆಂಗ್, ಕಂಪನಿ ಈ ಬಾರಿ ಹಾಫ್ ಸ್ಕ್ರೀನ್, ಬಾರ್ಡರ್ ಸ್ಕ್ರೀನ್ ಮೊಬೈಲ್ ಗಳಿಗೆ ವಿದಾಯ ಹೇಳಲಿದ್ದು, ಲಿನೊವೋ Z5 ಸಂಪೂರ್ಣ ಫುಲ್ ಸ್ಕ್ರೀನ್ ಮೊಬೈಲ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬಿಜಿಂಗ್ ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಿನೊವೋ Z5 ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎನ್ನಲಾಗಿದೆ.

loader