ಬರಲಿದೆ ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಬೈಕ್..!

First Published 26, May 2018, 2:46 PM IST
Lambretta plans to launch Electric Scooter
Highlights

ಇಟಲಿ ಮೂಲದ ವಿಶ್ವಪ್ರಸಿದ್ದ ಸ್ಕೂಟರ್ ತಯಾರಿಕಾ ಕಂಪನಿ ಲ್ಯಾಂಬ್ರೆಟ್ಟಾ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಕಳೆದ ವರ್ಷವಷ್ಟೇ ತನ್ನ 70ನೇ ವರ್ಷಾಚರಣೆ ಸಂಭ್ರಮಿಸಿದ್ದ ಲ್ಯಾಂಬ್ರೆಟ್ಟಾ ಕಂಪನಿ, ವಿ-ಸ್ಪೆಷಲ್ ಮಾಡೆಲ್ ನ್ನು ಬಿಡುಗಡೆ ಮಾಡಿತ್ತು.

ಬೆಂಗಳೂರು (ಮೇ.26):ಇಟಲಿ ಮೂಲದ ವಿಶ್ವಪ್ರಸಿದ್ದ ಸ್ಕೂಟರ್ ತಯಾರಿಕಾ ಕಂಪನಿ ಲ್ಯಾಂಬ್ರೆಟ್ಟಾ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಕಳೆದ ವರ್ಷವಷ್ಟೇ ತನ್ನ 70ನೇ ವರ್ಷಾಚರಣೆ ಸಂಭ್ರಮಿಸಿದ್ದ ಲ್ಯಾಂಬ್ರೆಟ್ಟಾ ಕಂಪನಿ, ವಿ-ಸ್ಪೆಷಲ್ ಮಾಡೆಲ್ ನ್ನು ಬಿಡುಗಡೆ ಮಾಡಿತ್ತು. 

ಈ ವರ್ಷ ಎಲೆಕ್ಟ್ರಿಕ್ ಬೈಕ್ ನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಆಸ್ಟ್ರೆಲೀಯಾದಲ್ಲಿ V50, V125 and V200 ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಬೈಕ್ ನ್ನು ಬಿಡುಗಡೆ ಮಾಡಲಿದೆ. ಇಷ್ಟೇ ಅಲ್ಲದೇ ಲ್ಯಾಂಬ್ರೆಟ್ಟಾ 2019 ರಲ್ಲಿ 400 cc ಮಾಡೆಲ್ ಬೈಕ್ ಕೂಡ ಲಾಂಚ್ ಮಾಡುವ ಯೋಜನೆಯಲ್ಲಿದೆ.

ಲ್ಯಾಂಬ್ರೆಟ್ಟಾದ ಪ್ರಸಿದ್ದ ವಿ-ಸ್ಪೆಷಲ್ ಮಾದರಿಯನ್ನು ಆಸ್ಟ್ರೀಯಾದ ಪ್ರಸಿದ್ದ ಕಿಸ್ಕಾ ಸಂಸ್ಥೆ ಅಭಿವೃದ್ದಿಪಡಿಸಿತ್ತು. ಕಿಸ್ಕಾ ಈ ಹಿಂದೆ ಕೆಟಿಎಂ ಹಾಗೂ ಹಸ್ಕಾರ್ನಾ ಬೈಕ್ ಗಳನ್ನು ಕೂಡ ಅಭಿವೃದ್ದಿಪಡಿಸಿತ್ತು.

 

loader