ಲಕ್ಸುರಿ ಕಾರುಗಳ ಮೇಲೆ ಬುಲ್ಡೋಜರ್ ಸವಾರಿ-46 ಕೋಟಿ ಮೌಲ್ಯದ ಕಾರು ಪುಡಿಪುಡಿ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 1, Aug 2018, 8:32 PM IST
LAMBORGHINIS AND PORSCHES CRUSHED IN CRACKDOWN ON CRIME
Highlights

68 ಲಕ್ಸುರಿ ಕಾರುಗಳು, ಪ್ರತಿ ಕಾರಿನ ಬೆಲೆ ಕೋಟಿ ಕೋಟಿ ರೂಪಾಯಿ..ಲ್ಯಾಂಬೋರ್ಗಿನಿ, ಪೊರ್ಶೆ, ಜಾಗ್ವರ್ ಕಾರುಗಳು ಎಲ್ಲವೂ ಅತ್ಯುತ್ತಮ ಕಂಡೀಷನ್‌ನಲ್ಲಿರೋ ಹೊಸ ಕಾರುಗಳು. ಆದರೆ ಈ ಕಾರುಗಳ ಮೇಲೆ ಬುಲ್ಡೋಜರ್ ಸವಾರಿ ಮಾಡಿ ಕ್ಷಣಾರ್ಧದಲ್ಲೇ ಕೋಟಿ ಮೌಲ್ಯದ ಪುಡಿಪುಡಿಯಾಗಿದೆ. ಏನಿದು ಪ್ರಕರಣ. ಇಲ್ಲಿದೆ.

ಫಿಲಿಪ್ಪೀನ್ಸ್(ಆ.01): ಪಾರ್ಕಿಂಗ್‌ನಲ್ಲಿ ಲ್ಯಾಂಬೋರ್ಗಿನಿ, ಪೋರ್ಶೆ, ಜಾಗ್ವಾರ್, ಲೆಕ್ಸಸ್, ಬೆಂಟ್ಲಿ ಸೇರಿದಂತೆ 68 ಕಾರುಗಳು ಸಾಲಾಗಿ ನಿಂತಿತ್ತು. ಜೊತೆಗೆ 8 ಸೂಪರ್ ಬೈಕ್‌ಗಳು ಕೂಡ ಅಲ್ಲಿತ್ತು. ಈ ಕಾರುಗಳ ಒಟ್ಟು ಬೆಲೆ 46 ಕೋಟಿ ರೂಪಾಯಿ. ಆದರೆ ಕಣ್ಮುಚ್ಚಿ ತೆರೆಯೋದರೊಳಗೆ ಈ ಕಾರುಗಳ ಮೇಲೆ ಬುಲ್ಡೋಜರ್ ಹತ್ತಿ ಪುಡಿ ಪುಡಿ ಮಾಡಿತ್ತು.

ಕೋಟಿ ಕೋಟಿ ಮೌಲ್ಯದ ಕಾರು ಕ್ಷಣಮಾತ್ರದಲ್ಲೇ ಪುಡಿ ಪುಡಿಯಾಗಿದ್ದು ಫಿಲಿಪ್ಪೀನ್ಸ್‌ನಲ್ಲಿ.  ಈ ಕಾರುಗಳ ಮೇಲೆ ಬುಲ್ಡೋಜರ್ ಹತ್ತಿಸೋ ನಿರ್ಧಾರ ಫಿಲಿಪ್ಪೀನ್ಸ್ ಸರ್ಕಾರದ್ದು. ಅಷ್ಟಕ್ಕೂ ಫಿಲಿಪ್ಪೀನ್ಸ್ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿರೋ ಹಿಂದೆ ಕಾರಣವೂ ಇದೆ.

ಫಿಲಿಪ್ಪೀನ್ಸ್ ಪೊಲೀಸರು ಮಾದಕ ದ್ರವ್ಯ ಸಾಗಾಣೆ ವೇಳೆ 68 ಲಕ್ಸುರಿ ಕಾರುಗಳನ್ನ ವಶಪಡಿಸಿಕೊಂಡಿತ್ತು. ಕಾನೂನು ಬಾಹಿರ ಡ್ರಗ್ಸ್ ಸಾಗಣೆ, ಸ್ಮಗ್ಲಿಂಗ್ ನಡೆಸುತ್ತಿದ್ದ ದರೋಡೆಕೋರರನ್ನ ಬಂಧಿಸಿ ಈ ಕಾರುಗಳನ್ನ ವಶಕ್ಕೆ ಪಡೆಯಲಾಗಿತ್ತು. 

ವಶಪಡಿಸಿಕೊಂಡ ಲಕ್ಸುರಿ ಕಾರುಗಳನ್ನ ಪುಡಿ ಪುಡಿ ಮಾಡಲು ಫಿಲಿಪ್ಪೀನ್ಸ್ ಪೊಲೀಸರು ನಿರ್ಧರಿಸಿದ್ದರು. ಇದಕ್ಕೆ ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಕೂಡ ಸಾಥ್ ನೀಡಿದರು. ಈ ಮೂಲಕ ಮಾದಕ  ದ್ರವ್ಯ ಕಳ್ಳಸಾಗಾಣೆ ಮಾಡುವರಿಗೆ ಪಾಠವಾಗಲಿ ಎಂದು ಬಹಿರಂಗವಾಗಿ ಕಾರುಗಳನ್ನ ಪುಡಿ ಮಾಡಲು ನಿರ್ಧರಿಸಿದರು.

ಕಠಿಣ ನಿರ್ಧಾರದ ಪ್ರಕಾರ, 68 ಲಕ್ಸುರಿ ಕಾರುಗಳು ಹಾಗೂ 8  ಸೂಪರ್ ಬೈಕ್‌ಗಳ ಮೇಲೆ ಬುಲ್ಡೋಜರ್ ಹತ್ತಿಸಿ ಪುಡಿ ಪುಡಿ ಮಾಡಲಾಯಿತು. ಈ ಕ್ಷಣಕ್ಕೆ ಫಿಲಿಪ್ಪೀನ್ಸ್ ಅಧ್ಯಕ್ಷ, ಪೊಲೀಸ್ ಇಲಾಖೆ ಹಾಗೂ ಹಲವು ಗಣ್ಯರು ಸಾಕ್ಷಿಯಾಗಿದ್ದರು. 

loader