ಬೆಂಗಳೂರು(ಸೆ.04): ಮಹೀಂದ್ರ ಹಲವು ವಿಶೇಷತೆಗಳೊಂದಿಗೆ ನೂತನ ಮರಾಜೋ ಕಾರು ಬಿಡುಗಡೆ ಮಾಡಿದೆ. ಟೊಯೊಟಾ ಇನೋವಾ, ಮಾರುತಿ ಎರ್ಟಿಗ ಕಾರುಗಳಿಗೆ ಭಾರಿ ಪೈಪೋಟಿ ನೀಡಬಲ್ಲ ಕಾರು ಎಂದೇ ಬಿಂಬಿತವಾಗಿರುವ ಮರಾಜೋ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಮಹೀಂದ್ರ ಮರಾಜೋ ಕಾರು ಶಾರ್ಕ್ ಮೀನಿನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದೆ. ಹೀಗಾಗಿಯೇ ಮರಾಜೋ ಶಾರ್ಕ್ ಮೀನಿನ ಹೋಲಿಕೆಗಳು ಈ ಕಾರಿನಲ್ಲಿದೆ. ಕಾರಿನ ಮುಂಬಾಗದ ಗ್ರಿಲ್ ಮೇಲಿನ ವಿನ್ಯಾಸ ಶಾರ್ಕ್ ಮೀನಿನ ಹಲ್ಲಿನ ಆಕಾರದಲ್ಲಿದೆ.

ಅಗ್ರೆಸ್ಸೀವ್ ಲುಕ್ ಹೊಂದಿರುವ ಮರಾಜೋ 1.5 ಲೀಟರ್ ಇಂಜಿನ್ ಹೊಂದಿದೆ. 121 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ಯೂ ಉತ್ವಾದಿಸಲಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರು ಮರಾಜೋ, ಹೆಚ್ಚು ಬಲಿಷ್ಠವಾಗಿದೆ.

7 ಸೀಟರ್ ಹಾಗೂ 8 ಸೀಟರ್ ಸಾಮರ್ಥ್ಯ ಮರಾಜೋ ಕಾರು ಸದ್ಯ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ಆದರೆ ಪೆಟ್ರೋಲ್ ವರ್ಶನ್ ಕಾರು ಲಭ್ಯವಿಲ್ಲ. ನೂತನ ಮರಾಜೋ ಕಾರು 17. 6 ಕೀಮಿ ಮೈಲೇಜ್ ನೀಡಲಿದೆ.

ಮಹೀಂದ್ರ ಮರಾಜೋ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ. ಎಬಿಎಸ್, ಡ್ಯುಯೆಲ್ ಫ್ರಂಟ್ ಏರ್ ಬ್ಯಾಗ್ಸ್, ಡಿಸ್ಕ್ ಬ್ರೇಕ್ ಸೇರಿದಂತೆ ಆಧುನಿತ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ.

ಟೊಯೊಟಾ ಇನೋವಾ, ಮಾರುತಿ ಎರ್ಟಿಗ, ಟಾಟಾ ಹೆಕ್ಸಾ ಕಾರುಗಳಿಗೆ ಹೋಲಿಸಿದರೆ ಮರಾಜೋ ಕಾರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮರಾಜೋ ಕಾರು 9.99 ಲಕ್ಷದಿಂದ(ಎಕ್ಸ್ ಶೋ ರೂಂ) ಪ್ರಾರಂಭವಾಗಲಿದ್ದು  13.90 ಲಕ್ಷದ(ಎಕ್ಸ್ ಶೋ ರೂಂ) ವರೆಗಿನ ವೇರಿಯೆಂಟ್‌ಗಳು ಲಭ್ಯವಿದೆ.