ಪುಣೆ(ಸೆ.25): ಭಾರತದ ಖ್ಯಾತ ಸ್ಟೀಲ್ ಕಂಪೆನಿ ಜಿಂದಾಲ್ ಗ್ರೂಪ್ ಇದೀಗ ಕಾರು ನಿರ್ಮಾಣಕ್ಕೆ ಎಂಟ್ರಿ ಕೊಡುತ್ತಿದೆ. ಪುಣೆಯಲ್ಲಿ ಎಲೆಕ್ಟ್ರಿಕಲ್ ಕಾರು ನಿರ್ಮಾಣ ಮಾಡಲು ಜೆಎಸ್‌ಡಬ್ಲೂ(JSW)ಗ್ರೂಪ್ ಮುಂದಾಗಿದೆ. ಈ ಮೂಲಕ JSW ಸ್ಟೀಲ್ ಕಂಪೆನಿ ಇನ್ಮುಂದೆ ಎಲೆಕ್ಟ್ರಿಕಲ್ ಕಾರು ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ.

1996ರಿಂದ ಬಾರತದಲ್ಲಿ ಕಾರು ನಿರ್ಮಾಣದಲ್ಲಿ ಸಕ್ರೀಯರಾಗಿರುವ ಅಮೇರಿಕಾದ ಮೂಲದ ಜನರಲ್ ಮೋಟಾರ್ಸ್ ಕಂಪೆನಿ ಭಾರತದಲ್ಲಿ 2 ನಿರ್ಮಾಣ ಘಟಕ ಹೊಂದಿದೆ. 2017ರಲ್ಲಿ ಗುಜರಾತ್ ಘಟಕವನ್ನ ಕಂಪೆನಿ ಮುಚ್ಚಿತ್ತು. ಇದೀಗ ಪುಣೆಯಲ್ಲಿರುವ ಮತ್ತೊಂದು ನಿರ್ಮಾಣ ಘಟಕವನ್ನ ಜಿಂದಾಲ್ ಕಂಪೆನಿ ಖರೀದಿಸಲು ಮಾಕುಕತೆ ನಡೆಸಿದೆ.

ಪುಣೆಯ ನಿರ್ಮಾಣ ಘಟಕವನ್ನ 3000-3500 ಕೋಟಿ ರೂಪಾಯಿಗೆ ಖರೀದಿಸಲು ಜನರಲ್ ಮೋಟಾರ್ ಕಂಪೆನಿ ಜೊತೆ ಜಿಂದಾಲ್ ಮಾತುಕತೆ ನಡೆಸಿದೆ. ಸಜ್ಜನ್ ಜಿಂದಾನ್ ನೇತೃತ್ವದ ಜಿಂದಾಲ್ ಕಂಪೆನಿ ಇದೀಗ ಎಲೆಕ್ಟ್ರಿಕಲ್ ಕಾರು ನಿರ್ಮಾಣಕ್ಕೆ ಮುಂದಾಗಿದೆ.

JSW ಕಾರ್ ಹೆಸರಿನಲ್ಲಿ ಜಿಂದಾಲ್ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ನಿರ್ಮಾಣ ಮಾಡಲಿದೆ. ಇಷ್ಟೇ ಅಲ್ಲ ಸಾಮಾನ್ಯವಾಗಿ ಎಲೆಕ್ಟ್ರಿಕಲ್ ಕಾರುಗಳು ದುಬಾರಿಯಾಗಿದೆ. ಇದರ ಲೀಥಿಯಂ ಬ್ಯಾಟರಿಯಿಂದಾಗಿ ಎಲೆಕ್ಟ್ರಿಕಲ್ ಕಾರುಗಳು ದುಬಾರಿಯಾಗಿದೆ. ಆದರೆ ಜಿಂದಾಲ್ ತನ್ನ ಎಲೆಕ್ಟ್ರಿಕಲ್ ಕಾರನ್ನ 10 ರಿಂದ 15 ಲಕ್ಷ ರೂಪಾಯಿಗೆ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಿದೆ.

ಪುಣೆಯಲ್ಲಿರುವ ಜನರಲ್ ಮೋಟಾರ್ಸ್ ಕಂಪೆನಿ 300 ಎಕರೆ ಪ್ರದೇಶದಲ್ಲಿದೆ. ವಾರ್ಷಿಕವಾಗಿ 1.30 ಲಕ್ಷ ಕಾರುಗಳನ್ನ ನಿರ್ಮಾಣ ಮಾಡೋ ಸಾಮರ್ಥ್ಯ ಹೊಂದಿದೆ.