Asianet Suvarna News Asianet Suvarna News

ಸಮ್ಮರ್ ಸರ್'ಪ್ರೈಸ್, ಧನಾಧನ್ ನಂತರ 4 ರೀತಿಯ ಹೊಸ ಆಫರ್ ಪ್ರಕಟಿಸಿದ ಜಿಯೋ

ನೂತನ ಡಿವೈಸ್ ಖರೀದಿಸಿದವರಿಗೆ ಹೊಸ ಸಿಮ್ ಕೂಡ  ನೀಡಲಾಗುತ್ತದೆ.ಜಿಯೋ ಸಿಮ್'ಗೆ ಆಕ್ಟಿವೇಟ್ ಆದ ಪ್ರಾರಂಭದಲ್ಲಿ ಒಂದು ಬಾರಿಗೆ ಮಾತ್ರವಿರುವ 99 ರೂ.ಗಳ ರಿಚಾರ್ಜ್ ಮಾಡಿಸಬೇಕು. ಒಮ್ಮೆ ಈ ರೀಚಾರ್ಜ್ ಮಾಡಿಸಿದ ನಂತರ ನಿಮಗೆ 4 ಡಾಟಾ ಸೌಲಭ್ಯಗಳ ಅನುಕೂಲಗಳಿರುತ್ತವೆ.

Jios Latest Offer For JioFi
  • Facebook
  • Twitter
  • Whatsapp

ಮುಂಬೈ(ಜು.07): ರಿಲಯನ್ಸ್ ಜಿಯೋದ ಉಚಿತ ಆಫರ್'ಗಳೆಲ್ಲವೂ ಬಹುತೇಕ ಈ ತಿಂಗಳು ಕೊನೆಗೊಳ್ಳಲಿದ್ದು, ಚಂದಾದಾರಿಗೆ ಸಂಸ್ಥೆಯು ಮತ್ತಷ್ಟು ಸೌಲಭ್ಯಗಳನ್ನು ಒಳಗೊಂಡ ಹೊಸ ಆಫರ್'ಅನ್ನು ಪ್ರಕಟಿಸಿದೆ.

ಈ ಆಫರ್ ಕಡಿಮೆ ಬೆಲೆಯಲ್ಲಿ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಿದ್ದು, ಕೇವಲ 2,27 ರೂ.ಗಳಿಗೆ  4ಜಿ ಡಾಟಾ 1ಜಿಬಿ ಡಾಟಾ ಪಡೆದುಕೊಳ್ಳಬಹುದು. ಹೊಸ ಸೌಲಭ್ಯವನ್ನು ಪಡೆಯಬೇಕಾದರೆ ನೀವು 1999 ರೂ.ನೂತನ ಜಿಯೋ ವೈಫೈ ಡಿವೈಸ್'ಅನ್ನು ಖರೀದಿಸಬೇಕು. ಅಲ್ಲದೆ ಇದು ನಿಮಗೆ ಶಾಶ್ವತವಾಗಿರುತ್ತದೆ. ಈ ಡಿವೈಸ್ 4ಜಿ ಜೊತೆಗೆ 3ಜಿ ಹಾಗೂ 2ಜಿ ಸ್ಮಾರ್ಟ್ ಫೋನ್'ಗಳಿಗೂ ಸಂಪರ್ಕ ಕಲ್ಪಿಸಲಿದ್ದು, ಈ ಮೊಬೈಲ್'ಗಳಲ್ಲಿಯೂ ವೇಗದ ಇಂಟರ್'ನೆಟ್ ಪಡೆದುಕೊಳ್ಳಬಹುದು.

ನೂತನ ಆಫರ್ ಪಡೆಯುವ ಬಗೆ

ನೂತನ ಡಿವೈಸ್ ಖರೀದಿಸಿದವರಿಗೆ ಹೊಸ ಸಿಮ್ ಕೂಡ  ನೀಡಲಾಗುತ್ತದೆ.ಜಿಯೋ ಸಿಮ್'ಗೆ ಆಕ್ಟಿವೇಟ್ ಆದ ಪ್ರಾರಂಭದಲ್ಲಿ ಒಂದು ಬಾರಿಗೆ ಮಾತ್ರವಿರುವ 99 ರೂ.ಗಳ ರಿಚಾರ್ಜ್ ಮಾಡಿಸಬೇಕು. ಒಮ್ಮೆ ಈ ರೀಚಾರ್ಜ್ ಮಾಡಿಸಿದ ನಂತರ ನಿಮಗೆ 4 ಡಾಟಾ ಸೌಲಭ್ಯಗಳ ಅನುಕೂಲಗಳಿರುತ್ತವೆ.

1) 509 ರೂ.: ಈ ಆಫರ್'ನಲ್ಲಿ ನಿತ್ಯ 2ಜಿಬಿ ಡಾಟಾ(28 ದಿನಗಳ ಅವಧಿ)ಗಳೊಂದಿಗೆ 4 ತಿಂಗಳ ಕಾಲಾವಧಿಯ 224 ಡಾಟಾ ಸೌಲಭ್ಯವಿರುತ್ತದೆ. ಜೊತೆಗೆ ಅನಿಯಮಿತ ಉಚಿತ ಕರೆಗಳು.

2) 149 ರೂ: ಪ್ರತಿ ತಿಂಗಳು 2 ಜಿಬಿ ಡಾಟಾ, 12 ತಿಂಗಳ ಅವಧಿವರೆಗೆ ಇಟ್ಟು 24 ಜಿಬಿ ವರೆಗೂ ಇರುತ್ತದೆ.

3) 309 ರೂ.: ನಿತ್ಯ 1ಜಿಬಿ ಡಾಟಾ 28 ದಿನಗಳ ಅವಧಿವರೆಗೆ ಒಟ್ಟು 168 ಜಿಬಿಗಳು. 12 ತಿಂಗಳವರೆಗೆ ಇರುತ್ತದೆ.

4) 999 ರೂ.: ಈ ಸೌಲಭ್ಯದಿಂದ ಪ್ರತಿ ತಿಂಗಳು 60 ಜಿಬಿ  ಡಾಟಾ ಪಡೆಯುತ್ತೀರಿ. ನಿತ್ಯದ ಡಾಟಾ ಮಿತಿ ಇರುವುದಿಲ್ಲ.

 

Follow Us:
Download App:
  • android
  • ios