ಜಿಯೋ ಏಪ್ರಿಲ್'ನಿಂದ  ಮೊದಲ 7 ತಿಂಗಳು ತನ್ನ ಚಂದಾದಾರರಿಗೆ ಡಾಟಾ, ಕರೆ, ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ನೀಡಿತ್ತು. ಪ್ರಸ್ತುತ ನೀಡುತ್ತಿರುವ ಸೇವೆಯೂ ರಿಯಾಯಿತಿ ದರದ ಸೇವೆಯಾಗಿದೆ.

ಮುಂಬೈ(ಅ.14): ಭಾರತೀಯ ಟೆಲಿಕಾಂ ರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಜಿಯೋ ದರ ಸಮರದ ಕಾರಣ 2ನೇ ತ್ರೈ ಮಾಸಿಕದಲ್ಲಿ 271 ಕೋಟಿ ರೂ. ನಷ್ಟ ಅನುಭವಿಸಿದೆ.

ಜೂನ್'ನ ಮೊದಲ ತ್ರೈಮಾಸಿಕದಲ್ಲಿ 21.3 ಕೋಟಿ ರೂ. ನಷ್ಟವಾಗಿತ್ತು. ಆದರೆ ಜಿಯೋದ ಅಂಗಸಂಸ್ಥೆ ಆರ್'ಐಎಲ್ ಪೆಟ್ರೋಕೆಮಿಕಲ್ ಮತ್ತು ರಿಫೈನಿಂಗ್ ವ್ಯವಹಾರಗಳಿಂದ 8,097 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭಾಂಶ ಕಳೆದ ಬಾರಿಗಿಂದ ಶೇ.12.5 ಏರಿಕೆಯಾಗಿದೆ. ತೈಲದಿಂದ ಟೆಲಿಕಾಂ ಕಂಪೆನಿಯ ಆದಾಯ ಶೇ.23.9 ಏರಿಕೆಯೊಂದಿಗೆ 1,01,169 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಚ್ಚಾ ತೈಲವನ್ನು ಇಂಧನವಾಗಿ ಮಾರ್ಪಡಿಸಿದ ಕಾರಣ ಪ್ರತಿ ಒಂದು ಬ್ಯಾರೆಲ್'ನಿಂದ 12 ಡಾಲರ್ ಲಾಭವಾಗಿದೆ.

ಜಿಯೋ ಏಪ್ರಿಲ್'ನಿಂದ ಮೊದಲ 7 ತಿಂಗಳು ತನ್ನ ಚಂದಾದಾರರಿಗೆ ಡಾಟಾ, ಕರೆ, ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ನೀಡಿತ್ತು. ಪ್ರಸ್ತುತ ನೀಡುತ್ತಿರುವ ಸೇವೆಯೂ ರಿಯಾಯಿತಿ ದರದ ಸೇವೆಯಾಗಿದೆ. ಆರ್'ಐಎಲ್ ದೂರಸಂಪರ್ಕ ಉದ್ಯಮದಲ್ಲಿ ಒಟ್ಟು 30 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ.ಸೆಪ್ಟಂಬರ್ 30ರ ವೇಳೆಗೆ ಜಿಯೋ ಚಂದಾದಾರರು 14 ಕೋಟಿ ದಾಟಿದ್ದಾರೆ.