ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋಯಿಂದ ಬಿಗ್ ಆಫರ್

Jio Post Paid Sim Available
Highlights

ಜಿಯೋ ದೇಶದ ಇಂಟರ್‌ನೆಟ್ ಲೋಕದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡಿದ್ದಷ್ಟೇ ಅಲ್ಲ ಪ್ರಿಪೇಯ್ಡ್ ಮೂಲಕ ಉಚಿತ ಕರೆ ಸೌಲಭ್ಯ, ದಿನಕ್ಕೆ ಒಂದೂವರೆ ಜಿಬಿ ಇಂಟರ್‌ನೆಟ್ ಸೇವೆ ನೀಡಿ ದೇಶದೆಲ್ಲೆಡೆ ಸದ್ದು ಮಾಡಿತ್ತು. ಆದರೆ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಹೆಚ್ಚು ಸಿಹಿಯಾಗುವಂತಹ ಯಾವುದೇ ಯೋಜನೆಗಳು ಜಿಯೋದಿಂದ ಸಿಕ್ಕಿರಲಿಲ್ಲ. ಈಗ ಆ ಕೊರತೆಗೆ ತೆರೆ ಬಿದ್ದಿದೆ. 

ಮಾಸಿಕ ರು. 199 ಕ್ಕೆ ಅಪರಿಮಿತ ಸೌಲಭ್ಯ ನೀಡಲಿರುವ ಹೊಸ ‘ಜೀರೋ-ಟಚ್’ ಪೋಸ್ಟ್ ಪೇಯ್ಡ್ ಪ್ಲಾನ್ ಅನ್ನು ಜಿಯೋ ಜಾರಿಗೊಳಿಸಿದೆ.

ಜಿಯೋ ಪೋಸ್ಟ್‌ಪೇಯ್ಡ್ ವಿಶೇಷತೆಗಳು

ಭಾರತದ ಮೊದಲ ‘ಜೀರೋ-ಟಚ್’ ಸೇವೆಯ ಅನುಭವ. ವಾಯ್ಸ್, ಇಂಟರ್‌ನೆಟ್, ಎಸ್ಸೆಮ್ಮೆಸ್, ಅಂತಾರಾಷ್ಟ್ರೀಯ ಕರೆ ಮುಂತಾದ ಎಲ್ಲ ಪೋಸ್ಟ್ ಪೇಯ್ಡ್ ಸೇವೆಗಳನ್ನು ಮುಂಚಿತವಾಗಿಯೇ ಸಕ್ರಿಯಗೊಳಿಸಲಾಗಿರುತ್ತದೆ (ಪ್ರೀ-ಆಕ್ಟಿವೇಟೆಡ್).

ಅಪರಿಮಿತ ಪ್ಲಾನ್‌ನಿಂದಾಗ ಅನಿರೀಕ್ಷಿತ ಹಾಗೂ ದುಬಾರಿ ಬಿಲ್‌ಗಳಿಂದ ಮುಕ್ತಿ ಸಿಗಲಿದೆ.

ಆಟೋ-ಪೇ ಸಕ್ರಿಯಗೊಳಿಸಿ ಬಿಲ್ ಪಾವತಿ ಬಗ್ಗೆ ಬೆರಳ ತುದಿಯಲ್ಲಿ ಇಮೇಲ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ಪ್ರಪಂಚದ ಯಾವ ಮೂಲೆಯಲ್ಲೂ ನಿಲ್ಲದ ಸೇವೆ.  ಮಾಸಿಕ ರು. 199  ರಲ್ಲಿ ಅನ್‌ಲಿಮಿಟೆಡ್ ಪ್ಲಾನ್

ಅಂತಾರಾಷ್ಟ್ರೀಯ ಕರೆ ದರಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಪ್ರಾರಂಭ ಅಂತಾರಾಷ್ಟ್ರೀಯ ಸೇವೆಗಳನ್ನು ಪ್ರಾರಂಭಿಸಲು ಯಾವುದೇ ಸುರಕ್ಷತಾ ಠೇವಣಿಯ ಅಗತ್ಯವಿಲ್ಲ

ಒಂದೇ ಕ್ಲಿಕ್‌ನಲ್ಲಿ ಸಕ್ರಿಯವಾಗುವ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ  ಮಿತವ್ಯಯ ಹಾಗೂ ಹೆಚ್ಚು ಬಳಕೆಯ ಗ್ರಾಹಕರಿಬ್ಬರಿಗೂ ಅನುಕೂಲಕರವಾದ ಅತ್ಯುತ್ತಮ ದರಗಳು  ಅನುಕೂಲಕರ ವಿದೇಶ ಸಂಚಾರಕ್ಕಾಗಿ ಅಪರಿಮಿತ ಡೇಟಾ ಹಾಗೂ ವಾಯ್ಸ್ ಪ್ಯಾಕ್‌ಗಳು ಲಭ್ಯ 

loader