ಜಿಯೋ ಸಿಮ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಮೊಬೈಲ್ ನೆಟ್’ವರ್ಕಿಂಗ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ ರಿಲಯನ್ಸ್ ಕಂಪನಿ ಇದೀಗ ಮತ್ತೊಂದು ಆಫರ್ ನೀಡಲು ಮುಂದಾಗಿದೆ. ಜಿಯೋ ಸಿಮ್ ನಂತರ ಇದೀಗ ಜಿಯೋ ಫೋನನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಸದ್ಯದಲ್ಲೇ ಬರಲಿದೆ. ಆ.24 ರಿಂದ ಆನ್’ಲೈನ್ ಬುಕಿಂಗ್ ಶುರುವಾಗಲಿದ್ದು ಫೋನ್ ಕೊಳ್ಳಲು ಆಸಕ್ತಿಯಿದ್ದವರು ಜಿಯೋ ವೆಬ್’ಸೈಟ್’ನಲ್ಲಿ ನೊಂದಣಿಯಾಗಬೇಕು. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ನವದೆಹಲಿ (ಆ.21): ಜಿಯೋ ಸಿಮ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಮೊಬೈಲ್ ನೆಟ್’ವರ್ಕಿಂಗ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ ರಿಲಯನ್ಸ್ ಕಂಪನಿ ಇದೀಗ ಮತ್ತೊಂದು ಆಫರ್ ನೀಡಲು ಮುಂದಾಗಿದೆ. ಜಿಯೋ ಸಿಮ್ ನಂತರ ಇದೀಗ ಜಿಯೋ ಫೋನನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಸದ್ಯದಲ್ಲೇ ಬರಲಿದೆ. ಆ.24 ರಿಂದ ಆನ್’ಲೈನ್ ಬುಕಿಂಗ್ ಶುರುವಾಗಲಿದ್ದು ಫೋನ್ ಕೊಳ್ಳಲು ಆಸಕ್ತಿಯಿದ್ದವರು ಜಿಯೋ ವೆಬ್’ಸೈಟ್’ನಲ್ಲಿ ನೊಂದಣಿಯಾಗಬೇಕು. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಕೊಳ್ಳುವವರು 1500 ರೂಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕು. ಮೂರು ವರ್ಷಗಳ ಬಳಿಕ ಇದನ್ನು ವಾಪಸ್ ನೀಡಲಾಗುತ್ತದೆ. ಅಂದರೆ ಉಚಿತವಾಗಿ ಫೊನ್ ಸಿಗಲಿದೆ.
ಜಿಯೋ ಫೋನ್ ಕ್ರಾಂತಿಕಾರಕ ಫೋನ್ ಆಗಿದ್ದು, ಇದು ಫೀಚರ್ ಫೋನ್ ಬಳಕೆದಾರರ ಜೀವನದಲ್ಲಿ ಪರಿವರ್ತನೆ ತರಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಡೇಟಾ ಇಂದು ಜನರ ಜೀವನದಲ್ಲಿ ಆಮ್ಲಜನಕದ ಸ್ಥಾನ ಪಡೆದಿದೆ. ಡೇಟಾ ಬಳಕೆಯಲ್ಲಿ ಭಾರತವು ಅಮೆರಿಕಾ ಹಾಗೂ ಚೀನಾವನ್ನೂ ಹಿಂದಿಕ್ಕಿದೆ ಎಂದು ಅವರು ಹೇಳಿದರು. ಜಿಯೋ ಫೋನ್ ಕ್ರಾಂತಿಕಾರಕ ಫೋನ್ ಆಗಿದ್ದು, ಇದು ಫೀಚರ್ ಫೋನ್ ಬಳಕೆದಾರರ ಜೀವನದಲ್ಲಿ ಪರಿವರ್ತನೆ ತರಲಿದೆ.
ಇದು ಜಿಯೋ ಅಧಿಕೃತ ವೆಬ್'ಸೈಟ್ ಆಗಿದ್ದು ಹೆಚ್ಚಿನ ಮಾಹಿತಿಗೆ ಇದಕ್ಕೆ ಭೇಟಿ ನೀಡಿ
http://www.jio.com/en-in/jp-keep-me-posted
