ಮತ್ತೆ ಒಂದು ವರ್ಷ ಉಚಿತ ಜಿಯೋ ಸೇವೆ ಪಡೆಯಲು ನೀವೇನು ಮಾಡಬೇಕು..?

Jio offers free 1 year Prime membership to its Subscribers
Highlights

ಕಳೆದ ವರ್ಷ ಆರಂಭವಾದ ರಿಲಯನ್ಸ್ ಜಿಯೋ ಇದೀಗ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಇಂದಿಗೆ ಜಿಯೋ ಪ್ರೈಮ್ ಮೆಂಬರ್ಶಿಪ್ ಮುಕ್ತಾಯವಾಗುತ್ತಿದೆ.

ಮುಂಬೈ : ಕಳೆದ ವರ್ಷ ಆರಂಭವಾದ ರಿಲಯನ್ಸ್ ಜಿಯೋ ಇದೀಗ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಇಂದಿಗೆ ಜಿಯೋ ಪ್ರೈಮ್ ಮೆಂಬರ್ಶಿಪ್ ಮುಕ್ತಾಯವಾಗುತ್ತಿದೆ.

ಆದರೆ ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ ಮತ್ತೆ ಒಂದು ವರ್ಷಗಳ ಕಾಲ ಜಿಯೋ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಇದಕ್ಕೆ ಯಾವುದೇ ರೀತಿಯಾದ ಹೆಚ್ಚುವರಿ ಹಣವನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ.  ಜಿಯೋ ಮೆಂಬರ್’ಗಳು ಅದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದೆ.

ಜಿಯೋ ಸೇವೆ ಮುಂದುವರಿಸುವುದಾದಲ್ಲಿ ನೀವು ಮಾಡಬೇಕಾದದು ಇಷ್ಟೆ

 ಮೈ ಜಿಯೋ App ಡೌನ್ ಲೋಡ್ ಮಾಡಿಕೊಂಡು ಮುಂದಿನ 12 ತಿಂಗಳು ಸೇವೆಯನ್ನು ಮುಂದುವರಿಸುವ ಆಸಕ್ತಿ ಇರುವುದಾಗಿ ನೀವು ವಿಚಾರ ಹಂಚಿಕೊಳ್ಳಬೇಕು. ಆಗ ನೀವು ಮತ್ತೆ ಒಂದು ವರ್ಷಗಳ ಕಾಲ  ಪ್ರೈಮ್ ಮೆಂಬರ್ಶಿಪ್ ಪಡೆಯುತ್ತೀರಿ.

ಇನ್ನು ನೀವು 2018ರ ಏಪ್ರಿಲ್ ಬಳಿಕ ನೀವು ಜಿಯೋ ಗ್ರಾಹಕರಾಗಿದ್ದಲ್ಲಿ 99 ರು. ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ  ಮೆಂಬರ್ಶಿಪ್ ಪಡೆಯಬಹುದಾಗಿದೆ.

loader