ಡಿಸೆಂಬರ್ ‌`ಗೆ ಅಂತ್ಯವಾದ ಉಚಿತ ಆಫರ್‌ಗಳನ್ನು ಹ್ಯಾಪಿ ನ್ಯೂ ಇಯರ್‌ ಹೆಸರಿನಲ್ಲಿ ವಿಸ್ತರಿಸಿದ ಜಿಯೋ ಮಾರ್ಚ್`ಗೆ ಅಂತ್ಯವಾಗುವ ಹೊಸ ಆಫರನ್ನು ಮತ್ತೊಂದು ಹೆಸರಿನಲ್ಲಿ ವಿಸ್ತರಿಸಲಿದೆ.

ನವದೆಹಲಿ(ಜ.21): ಏರ್‌ಟೆಲ್‌, ಐಡಿಯಾ, ವೊಡಾಫೋನ್‌ ಮತ್ತು ಬಿಎಸ್‌ಎನ್‌ಎಲ್‌ ಹೊಸ ಕೊಡುಗೆಗಳೊಂದಿಗೆ ಸ್ಪರ್ಧೆಗೆ ಇಳಿದಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಜಿಯೋ ನೀಡುತ್ತಿರುವ ಉಚಿತ ಕರೆ ಮತ್ತು ಡಾಟಾ ಆಫರ್‌ಗಳನ್ನು ಜೂನ್‌ 30ವರೆಗೆ ವಿಸ್ತರಿಸುವ ಸಾಧ್ಯತೆ ಇದೆ.

ಡಿಸೆಂಬರ್‌`ಗೆ ಅಂತ್ಯವಾದ ಉಚಿತ ಆಫರ್‌ಗಳನ್ನು ಹ್ಯಾಪಿ ನ್ಯೂ ಇಯರ್‌ ಹೆಸರಿನಲ್ಲಿ ವಿಸ್ತರಿಸಿದ ಜಿಯೋ ಮಾರ್ಚ್`ಗೆ ಅಂತ್ಯವಾಗುವ ಹೊಸ ಆಫರನ್ನು ಮತ್ತೊಂದು ಹೆಸರಿನಲ್ಲಿ ವಿಸ್ತರಿಸಲಿದೆ.

ಆದರೆ, ಹೊಸ ಆಫರ್‌ ಪೂರ್ಣ ಉಚಿತವಾಗಿರುವುದಿಲ್ಲ. ಗ್ರಾಹಕರು ಮಾಸಿಕ 100 ರೂ. ಪಾವತಿಸಬೇಕಾಗುತ್ತದೆ. ಈ 100 ರೂ. ಆಫರ್‌`ನಲ್ಲಿ ಈಗ ಇರುವ ಎಲ್ಲಾ ಉಚಿತ ಸೇವೆಗಳೂ ಲಭ್ಯವಾಗಲಿವೆ. ಜೂನ್‌ ನಂತರವಷ್ಟೇ ರಿಲಯನ್ಸ್‌ ಹೊಸ ಪ್ಲಾನ್‌ ಪ್ರಕಟಿಸುವ ನಿರೀಕ್ಷೆ ಇದೆ.

ರಿಯಲನ್ಸ್‌ ಜಿಯೋಗೆ ಸ್ಪರ್ಧೆ ನೀಡಲು, ಏರ್‌ಟೆಲ್‌, ಐಡಿಯಾ, ವೊಡಾಫೋನ್‌ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಹೊಸ ಆಫರ್‌ಗಳನ್ನು ನೀಡುತ್ತಿವೆ. ತಾರಕಕ್ಕೇರಿರುವ ಸ್ಪರ್ಧೆಯ ಫಲ ಗ್ರಾಹಕರಿಗೆ ದಕ್ಕುತ್ತಿದೆ.

ಈ ನಡುವೆ ರಿಲಯನ್ಸ್‌ ಜಿಯೋ ಉಚಿತ ಆಫರ್‌ ವಿಸ್ತರಿಸಿದ್ದನ್ನು ಟ್ರಾಯ್‌`ನಲ್ಲಿ ಪ್ರಶ್ನಿಸಿದ್ದ ಏರ್‌ಟೆಲ್‌ ಮತ್ತು ಐಡಿಯಾ ಸೆಲ್ಯುಲರ್‌ ಈಗ ಟಿಡಿಸ್ಯಾಟ್‌`ನಲ್ಲಿ ಮೇಲ್ಮನವಿ ಸಲ್ಲಿಸಿವೆ. ವಿಷಯ ಇನ್ನೂ ಇತ್ಯರ್ಥವಾಗಿಲ್ಲ.

ಈ ನಡುವೆ 4ಜಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಗ್ರಾಹಕರು 4ಜಿ ಸಿಮ್‌ ಪಡೆದಾಗ ಅಥವಾ 3ಜಿ ಸೇವೆಯನ್ನು 4ಜಿಗೆ ಪರಿವರ್ತಿಸಿದಾಗ ಹೆಚ್ಚಿನ ಡಾಟಾ ಕೊಡುಗೆಯನ್ನು ಏರ್‌ಟೆಲ, ಐಡಿಯಾ, ವೊಡಾಫೋನ್‌ಗಳು ನೀಡುತ್ತಿವೆ.