ಜಿಯೋನಿಂದ 49 ರೂ.ಗಳಿಗೆ ತಿಂಗಳಿಗೆ ಅನಿಯಮಿತ ಡಾಟಾ ಹಾಗೂ ಕರೆ ಆಫರ್

Jio launches lowest rental of Rs 49 for feature phone users
Highlights

ಜಿಯೋ ಈಗಾಗಲೇ ಸ್ಮಾರ್ಟ್ ಫೋನ್'ಗಳಿಗೆ ಹಾಲಿ ಕೊಡುಗೆಯಲ್ಲಿ ಇಂದಿನಿಂದ 500 ಎಂಬಿ ಹೆಚ್ಚುವರಿ ಜಿಬಿಯನ್ನು ವಿಸ್ತರಿಸಿದೆ.  149, 349, 399 ಹಾಗೂ 449 ರೂ. ಯೋಜನೆಯನ್ನು ಬಳಸುತ್ತಿರುವವರು  ಹಾಲಿ ಒಂದು ಜಿಬಿ ಬದಲಿಗೆ 1.5 ಜಿಬಿ, 198, 398, 448 ಹಾಗೂ 498 ಚಂದಾದಾರರು 1.5 ಬದಲಿಗೆ 2 ಜಿಬಿ ಪಡೆದರೆ, 199, 448 ಹಾಗೂ 509 ಆಫರ್ ಉಳ್ಳವರು 2 ಜಿಬಿಯ ಬದಲಿಗೆ 2.5 ಜಿಬಿ ಪಡೆಯಲಿದ್ದಾರೆ.  

ನವದೆಹಲಿ(ಜ.26): ಟೆಲಿಕಾಂ ಸಂಸ್ಥೆ ಜಿಯೋ ಗಣರಾಜ್ಯದ ದಿನದಂದು ನೂತನ ಆಫರ್ ಬಿಡುಗಡೆ ಮಾಡಿದ್ದು 49 ರೂ.ಗಳಿಗೆ ಅನಿಯಮಿತ ಡಾಟಾ ಹಾಗೂ ಕರೆ ಲಭ್ಯವಿರುತ್ತದೆ.

ಆದರೆ ಈ ಯೋಜನೆ ಸ್ಮಾರ್ಟ್ ಫೋನ್'ಗಳಿಗೆ ಲಭ್ಯವಿರದೆ ಜಿಯೋ ಸಂಸ್ಥೆಯ ಬೇಸಿಕ್ ಫೋನ್'ಗೆ ಅನ್ವಯಿಸುತ್ತದೆ. ಡಾಟಾ ಸೌಲಭ್ಯ 1 ಜಿಬಿವರೆಗೂ ಹೈಸ್ಪೀಡ್'ನಲ್ಲಿದ್ದು ಅನಂತರ ವೇಗದ ಮಿತಿ ಕಡಿಮೆಯಾಗುತ್ತದೆ. ಇದೇ ರೀತಿ ಕೈಗೆಟಕುವ ಬೆಲೆಯಲ್ಲಿ ರೂ.11,21,51 ಹಾಗೂ 101 ರೂ.ಗಳಿಗೂ ಆಫರ್'ಗಳನ್ನು ಪ್ರಕಟಿಸಿದೆ.

ಜಿಯೋ ಈಗಾಗಲೇ ಸ್ಮಾರ್ಟ್ ಫೋನ್'ಗಳಿಗೆ ಹಾಲಿ ಕೊಡುಗೆಯಲ್ಲಿ ಇಂದಿನಿಂದ 500 ಎಂಬಿ ಹೆಚ್ಚುವರಿ ಜಿಬಿಯನ್ನು ವಿಸ್ತರಿಸಿದೆ.  149, 349, 399 ಹಾಗೂ 449 ರೂ. ಯೋಜನೆಯನ್ನು ಬಳಸುತ್ತಿರುವವರು  ಹಾಲಿ ಒಂದು ಜಿಬಿ ಬದಲಿಗೆ 1.5 ಜಿಬಿ, 198, 398, 448 ಹಾಗೂ 498 ಚಂದಾದಾರರು 1.5 ಬದಲಿಗೆ 2 ಜಿಬಿ ಪಡೆದರೆ, 199, 448 ಹಾಗೂ 509 ಆಫರ್ ಉಳ್ಳವರು 2 ಜಿಬಿಯ ಬದಲಿಗೆ 2.5 ಜಿಬಿ ಪಡೆಯಲಿದ್ದಾರೆ.  

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬರಲಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ  ಇನ್ನುಳಿದ ಕಂಪನಿಗಳು ಕೂಡ ದೇ ರೀತಿಯ ಆಫರ್'ಗಳನ್ನು ನೀಡಿವೆ.

--

loader