ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಪ್ಲ್ಯಾನ್‌'ನಲ್ಲಿ ಬದಲಾವಣೆ ಮಾಡಿದೆ. ಈ ಹಿಂದಿನ 309 ರೀಚಾರ್ಜ್ ರದ್ದು ಮಾಡಲಾಗಿದೆ. 399 ರು.ನ ರೀಚಾರ್ಜ್ ಪ್ಯಾಕ್ ದರ ಹೆಚ್ಚಿಸಿ 459 ರು.ಗೆ ತಲುಪಿಸಲಾಗಿದೆ. ಜೊತೆಗೆ ದೈನಂದಿನ 1 ಜಿಬಿ ಡಾಟಾ ಮುಗಿದ ಬಳಿಕ ಇದ್ದ ಇಂಟರ್ನೆಟ್ ವೇಗವನ್ನು 128 ಕೆಬಿಪಿಎಸ್‌ನಿಂದ 64 ಕೆಬಿಪಿಎಸ್ ಗೆ ಇಳಿಸಲಾಗಿದೆ.
ಮುಂಬೈ(ಅ.20) ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಪ್ಲ್ಯಾನ್'ನಲ್ಲಿ ಬದಲಾವಣೆ ಮಾಡಿದೆ. ಈ ಹಿಂದಿನ 309 ರೀಚಾರ್ಜ್ ರದ್ದು ಮಾಡಲಾಗಿದೆ. 399 ರು.ನ ರೀಚಾರ್ಜ್ ಪ್ಯಾಕ್ ದರ ಹೆಚ್ಚಿಸಿ 459 ರು.ಗೆ ತಲುಪಿಸಲಾಗಿದೆ. ಜೊತೆಗೆ ದೈನಂದಿನ 1 ಜಿಬಿ ಡಾಟಾ ಮುಗಿದ ಬಳಿಕ ಇದ್ದ ಇಂಟರ್ನೆಟ್ ವೇಗವನ್ನು 128 ಕೆಬಿಪಿಎಸ್ನಿಂದ 64 ಕೆಬಿಪಿಎಸ್ ಗೆ ಇಳಿಸಲಾಗಿದೆ.
ಹಾಲಿ ಇರುವ 399 ರು.ನ ಪ್ಯಾಕೇಜ್'ಗೆ ಇನ್ನು ಕೇವಲ 70 ದಿನ ಮಾತ್ರ ದೈನಂದಿನ 1 ಜಿಬಿ ಡಾಟಾ ಸಿಗಲಿದೆ. ಪೋಸ್ಟ್ ಪೇಯ್ಡ್ ವ್ಯಾಲಿಡಿಟಿ ಅವಧಿಯನ್ನು 30 ದಿನಕ್ಕೆ ಇಳಿಸಿದ್ದು, 400 ರು. ಭದ್ರತಾ ಠೇವಣಿ ಇಡುವುದನ್ನು ಕಡ್ಡಾಯ ಮಾಡಲಾಗಿದೆ.
