ಈ ಆಫರ್'ನಲ್ಲಿ ಹಾಲಿಯಿರುವ 'ಧನ್ ದನಾ ಧನ್' ಯೋಜನೆಯ ಸೌಲಭ್ಯಗಳು(ನಿತ್ಯ 1 ಜಿಬಿ ಉಚಿತ ಡಾಟಾ,ಉಚಿತ ಕರೆ, ಸಂದೇಶಗಳು) ಚಂದಾದಾರರಿಗೆ ಉಪಯೋಗವಾಗಲಿದೆ.

ಮುಂಬೈ(ಅ.12): ಭಾರತೀಯ ಪ್ರಮುಖ ಟೆಲಿಕಾಂ ಕಂಪನಿ ಜಿಯೋ ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ಟೋಬರ್ 12ರಿಂದ 19ರವರೆಗೆ ರೂ. 399 ರೀಚಾರ್ಜ್ ಮಾಡಿಸಿದರು ಶೇ. 100 ಕ್ಯಾಶ್ ಬ್ಯಾಕ್ ಆಫರ್ ಪ್ರಯೋಜನ ಪಡೆಯುತ್ತಾರೆ. ಈ ಉಚಿತ ಯೋಜನೆಯ ಆಫರ್'ಅನ್ನು ನ.15 ರ ನಂತರ ಪಡೆಯಬಹುದಾಗಿದ್ದು, ಗ್ರಾಹಕರಿಗೆ 50 ರೂ.ಗಳ 8 ವೋಚರ್ ಅನ್ನು ನೀಡಲಾಗುತ್ತದೆ. ಒಮ್ಮೆಗೆ ಮಾತ್ರ ಒಂದು ವೋಚರ್ ಸೌಲಭ್ಯ ಪಡೆಯಬಹುದಾಗಿದೆ. ಅಂದರೆ 10 ತಿಂಗಳ ಕಾಲ 50 ರೂ.ಗಳನ್ನು ಪಡೆದುಕೊಳ್ಳಬಹುದು.

ಈ ಆಫರ್'ನಲ್ಲಿ ಹಾಲಿಯಿರುವ 'ಧನ್ ದನಾ ಧನ್' ಯೋಜನೆಯ ಸೌಲಭ್ಯಗಳು(ನಿತ್ಯ 1 ಜಿಬಿ ಉಚಿತ ಡಾಟಾ,ಉಚಿತ ಕರೆ, ಸಂದೇಶಗಳು) ಚಂದಾದಾರರಿಗೆ ಉಪಯೋಗವಾಗಲಿದೆ. ಪ್ರೀಪೇಯ್ಡ್ ಹಾಗೂ ಪೋಸ್ಟ್'ಪೇಯ್ಡ್ ಚಂದಾದಾರರಿಬ್ಬರಿಗೂ ಅನುಕೂಲವಾಗಲಿದೆ. ಈ ಸೌಲಭ್ಯವನ್ನು ಜಿಯೋ ಆಪ್, ವೆಬ್'ಸೈಟ್, ಮಳಿಗೆ ಮುಂತಾದ ಕಡೆ ದೊರೆಯಲಿದೆ.