ಇದೇ ವೇಳೆ ಇಂಥವೇ ಸೆಲ್ಫ್-ಕೇರ್‌ಗಳಾದ ಏರ್‌ಟೆಲ್, ವೋಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಸಂಸ್ಥೆಗಳ ಆ್ಯಪ್‌ಗಳು 1 ಕೋಟಿ ಡೌನ್‌ಲೋಡ್‌ಗಳನ್ನು ದಾಖಲಿಸಿವೆ.

ನವದೆಹಲಿ(ಆ.13): ಆಕರ್ಷಕ ಕೊಡುಗೆಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಲವೇ ದಿನಗಳಲ್ಲಿ ಮನೆ ಮಾತಾಗಿರುವ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದೆ.

ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೈ ಜಿಯೋ ಅಪ್ಲಿಕೇಷನ್ ಡೌನ್‌ಲೋಡ್‌ಗಳ ಸಂಖ್ಯೆ 10 ಕೋಟಿ ದಾಟಿದೆ. ಈ ಮೂಲಕ ಈ ಸಾಧನೆಗೈದ ಭಾರತದ ಎರಡನೇ ಆ್ಯಪ್ ಎಂಬ ಖ್ಯಾತಿಗೆ ಮೈ ಜಿಯೋ ಪಾತ್ರವಾಗಿದೆ. ಇದೇ ವೇಳೆ ಇಂಥವೇ ಸೆಲ್ಫ್-ಕೇರ್‌ಗಳಾದ ಏರ್‌ಟೆಲ್, ವೋಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಸಂಸ್ಥೆಗಳ ಆ್ಯಪ್‌ಗಳು 1 ಕೋಟಿ ಡೌನ್‌ಲೋಡ್‌ಗಳನ್ನು ದಾಖಲಿಸಿವೆ. ಇದಕ್ಕೂ ಮುನ್ನ ಈ ಸಾಧನೆಯನ್ನು ಹಾಟ್‌ಸ್ಟಾರ್ ಮಾಡಿತ್ತು. ರಿಲಯನ್ಸ್ ಜಿಯೋದ ಟೀವಿ ಆ್ಯಪ್ ಜಿಯೋ ಟೀವಿ ಈವರೆಗೆ ಐದು ಕೋಟಿಗಿಂತ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.