ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲಿ ಯಾವುದೇ ದೇಶ ಒಂದೇ ಉಡಾವಣೆಯಲ್ಲಿ ಶತಕ ಬಾರಿಸಿದ ಉದಾಹರಣೆಯೇ ಇಲ್ಲ. 2014ರಲ್ಲಿ ರಷ್ಯಾ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆ ಆಗಿತ್ತು. 104 ಉಪಗ್ರಹಗಳ ಪೈಕಿ 4 ಭಾರತದ್ದವಾದರೆ, 101 ಉಪಗ್ರಹಗಳು ವಿದೇಶಕ್ಕೆ ಸೇರಿದವು. ಅದರಲ್ಲೂ ನಾಸಾದಂತಹ ಜಗದ್ವಿಖ್ಯಾತ ಬಾಹ್ಯಾಕಾಶ ಸಂಸ್ಥೆ ಹೊಂದಿರುವ ಅಮೆರಿಕದ 96 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿಕೊಳ್ಳುವ ಹೊಣೆಗಾರಿಕೆ ಹೊತ್ತಿದೆ.
ಚೆನ್ನೈ(ಫೆ.15): ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಬುಧವಾರ ಬೆಳಗ್ಗೆ 9.28ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಉಡಾವಣೆ ಮಾಡಲಿದೆ. ಇದಕ್ಕಾಗಿ ಮಂಗಳವಾರ ಮುಂಜಾನೆ 5:28 ರಿಂದ 28 ಗಂಟೆಗಳ ಕೌಂಟ್ಡೌನ್ ಆರಂಭಿಸಲಾಗಿದೆ.
ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲಿ ಯಾವುದೇ ದೇಶ ಒಂದೇ ಉಡಾವಣೆಯಲ್ಲಿ ಶತಕ ಬಾರಿಸಿದ ಉದಾಹರಣೆಯೇ ಇಲ್ಲ. 2014ರಲ್ಲಿ ರಷ್ಯಾ ಒಂದೇ ರಾಕೆಟ್ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆ ಆಗಿತ್ತು.
